‘ಅಂತಾರಾಷ್ಟ್ರೀಯ ಕುಂಬಳಕಾಯಿ’ ಅಬ್ದುಲ್ ರಶೀದ್ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕತೆಗಳಲ್ಲಿ ಉಜ್ವಲ ಬದುಕು ಇರುವ ಹಾಗೆಯೇ ಪುಟಗಳಿಂದ ಹೊರಕ್ಕೆ ಜಲದು ಜೀವನದಲ್ಲಿ ಒಂದಾಗುವಂಥ ಪಾತ್ರಗಳೂ ಸಹಾನುಭೂತಿಯಿಂದ ಸೃಷ್ಟಿಸಲಾಗಿರುವ ಈ ಪಾತ್ರಗಳೋ, ತಮ್ಮ ಸಂಸ್ಕೃತಿಯ, ಚಲತೆಯ, ಅಸ್ಮಿತೆಯ ಸರಹದ್ದುಗಳನ್ನು ಒಡೆದುಹಾಕುವಷ್ಟು ಶಕ್ತವಾಗಿವೆ. ನಮ್ಮ ಅನೇಕ ಕತೆಗಾರರು (ವಿಮರ್ಶಕರು ಕೂಡ) ನೇರವಾಲ ಕತೆ ಹೇಳುವುದನ್ನು ಸಂಶಯದಿಂದ ನೋಡುತ್ತಿರುವ ಈ ಕಾಲದಲ್ಲಿ ಏಕಕಾಲಕ್ಕೆ ನೇರವಾಗಿದ್ದೂ ಸಂಕೀರ್ಣತೆಯನ್ನು ಸಾಧಿಸುವ ಈ ಕತೆಗಳು ಗಾಢ ಅನುಭವವನ್ನು ಕೊಡುವ, ವಾಸ್ತವ ಮತ್ತು ಫ್ಯಾಂಟಸಿಯ ನಡುವಣ ಗೆರೆಯನ್ನು ಅಳಿಸಿಹಾಕುವ ಅಪ್ಪಟ ಕತೆಗಳು.
'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...
READ MORE