ಚಿತ್ತಾಲರ ಕೊನೆಯ ಕತೆಗಳ ಸಂಕಲನ ’ಕೋಳಿ ಕೂಗುವ ಮುನ್ನ’. ಈ ಸಂಕಲನದ ಬೆನ್ನುಡಿಯಲ್ಲಿ ವಿಮರ್ಶಕ ಜಿ.ಎಸ್. ಆಮೂರ ಅವರು ’ಸಣ್ಣ ಕಥೆಯ ಕ್ಷೇತ್ರದಲ್ಲಿ ಯಶವಂತರು ದೊರಕಿಸಿದ ಯಶಸ್ಸು ಶ್ರೇಷ್ಠ ಮಟ್ಟದ್ದು ಎನ್ನುವುದರಲ್ಲಿ ಸಂಶಯವಿರಲಾರದು. ಅವರ ಈ ಸಾಧನೆಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅವರ ಗತಿಶೀಲ ಸಂವೇದನೆ, ಅವರ ಸಾಹಿತ್ಯಕ್ಕೆ ಸಣ್ಣ ಹಾಗೂ ಸಾಂಗತ್ಯಗಳನ್ನು ತಂದುಕೊಡುವ ಮೂಲಭೂತ ಆಸ್ಥೆ, ಅನುಭವ ಅವರಲ್ಲಿವೆ. ತಮ್ಮದೇ ಆದ ಪ್ರಬುದ್ಧ ಜೀವನದೃಷ್ಟಿಯೂ ಅವರಿಗಿದೆ. ಇದರ ಜೊತೆಗೆ ಪರಿಸರದ ಸ್ಥಿತ್ಯಂತರಗಳಿಗೆ ಸೃಜನಶೀಲವಾಗಿ ಪ್ರತಿಕ್ರಿಯಿಸಬಲ್ಲ ಚೈತನ್ಯಶೀಲತೆಯನ್ನು ಅವರು ಹೊಂದಿದ್ದಾರೆ. ಎರಡನೆಯದಾಗಿ, ತಮ್ಮ ವಿಶಿಷ್ಟ ದರ್ಶನದ ವಿವಿಧ ಮುಖಗಳನ್ನು ಸಾಕಾರಗೊಳಿಸಬಲ್ಲ ಕಲೆ, ಈ ಕಲೆಯನ್ನು ಸಾಧಿಸುವುದಕ್ಕೆ ಅವಶ್ಯವಾದ ಪರಿಶ್ರಮ, ಪೂರ್ವಚಿಂತನ, ಪ್ರಯೋಗಶೀಲತೆ, ಭಾಷಾ ಸಂಪತ್ತೂ ಅವರಲ್ಲಿವೆ’ ಎಂದು ವಿವರಿಸಿದ್ದಾರೆ.
ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...
READ MORE