ಲೇಖಕ ಬಿ.ಚಂದ್ರೇಗೌಡ ಕೃತಿ ‘ಜಬೀವುಲ್ಲಾ ಕೊಟ್ಟ ಕೋಳಿ’, 22 ಕಥೆಗಳಿರುವ ಹಾಸ್ಯ ಲೇಖನಗಳ ಸಂಕಲನವಾಗಿದೆ. ಪ್ರೊ.ಎಂ.ಬಿ.ನಟರಾಜ್ ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಲೇಖಕಿ ಗೌರಿ ಲಂಕೇಶ್ ಕೃತಿಗೆ ಬೆನ್ನುಡಿ ಬರೆದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಪುಟ್ಟಕ್ಕನ ಪುರಾಣ, ಜೋಗದ ಗುಂಡಿ, ಜಬೀವುಲ್ಲಾ ಕೊಟ್ಟ ಕೋಳಿ, ನನ್ನ ನಿನ್ನ ನಡುವೆ, ಬಿಸ್ಮಿಲ್ಲಾಖಾನ್ ಮತ್ತು ಬಂಗಾರದ ಮನುಷ್ಯ ಭಾಗ 2, ಶಂಭು, ಪಿರಿಪಿರಿ ಜನರೊಂದಿಗೆ, ಸಿಡಿಗಡ್ಡಿ ತಮ್ಮಣ್ಣಗೌಡರನ್ನು ಮಾತಾಡೋಸೊದ್ಯಂಗೆ!, ಕೆ.ಜಿ.ಜಿ ಮೇಷ್ಟ್ರು ಪರೀಕ್ಷೆ ಬರೆದದ್ದು, ಸ್ವಾಮಿಗೌಡ ಸಾಹೇಬನಾಗಿದ್ದು,ಕಡಿದಾಳು ಶಾಮಣ್ಣನ ಶೌಚಾಲಯಗಳು,ನೀಲೂ ಕಿಡ್ನಾಪ್ ಆದದ್ದು, ವರಾಹ ಪುರಾಣ ಅಮೇಧ್ಯವಾದದ್ದು, ನಾವು ಕುರುಕ್ಷೇತ್ರ ನಾಟಕ ಆಡಿದ್ದೊ, ನಾಟಕದ ನಂತರ, ನಾವು ನಾಟಕಕ್ಕೆ ನಮಸ್ಕಾರ ಹಾಕಿದ್ದು, ನಾನೊಂದು ಸಿನಿಮಾಕ್ಕೆ ಸಂಭಾಷಣೆ ಬರೆದದ್ದು, ಮಾಡ್ಕಳ್ಳಿ ಟಾಪಿದ್ದತೆ, ಚಿಕ್ಕುಚ್ಚ ಜೋಗದ ಜಲಪಾತ ನೋಡಿದ್ದು, ವಾಟಿಸ್ಸೆಯ ವಿರಾಟ ರೂಪ, ಭೋಜನಪ್ರಿಯರ ಬಗ್ಗೆ, ಬಿ.ಸರೋಜಾದೇವಿಯ ಅಜ್ಞಾತ ಪ್ರೇಮಿ ಹೀಗೆ ಅನೇಕ ಶೀರ್ಷಿಕೆಗಳ ಹಾಸ್ಯ ಲೇಖನಗಳಿವೆ.
ಕಟ್ಟೆ ಪುರಾಣ ಜನಪ್ರಿಯ ಅಂಕಣದ ಮೂಲಕ ಚಿರಪರಿಚಿತರಾದ ಲಂಕೇಶ್ ಪತ್ರಿಕೆ ಬಹಗಾರರಾಗಿದ್ದ ಬಿ. ಚಂದ್ರೆಗೌಡರು ಮಂಡ್ಯ ಜಿಲ್ಲೆಯ ನಾಗಮಂಗಲದವರು. ಪಿ. ಲಂಕೇಶರ ಪತ್ರಿಕೆಯಲ್ಲಿ ವರದಿಗಾರರಾಗಿ ಹಾಗೂ ಅಂಕಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಮುಖ ಕೃತಿಗಳು: ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಟ್ಟೆ ಪುರಾಣ ಭಾಗ-1, ಕಟ್ಟೆ ಪುರಾಣ ಭಾಗ-2, ಬಾಹುಬಲಿ ಬುಡದಲ್ಲಿ ಜನಸಾಗರ, ನಾವು ನಾಟಕ ಆಡಿದ್ದೂ (ಹಾಸ್ಯ ಸಂಕಲನ), ಕಟ್ಟೆ ಪುರಾಣ, ಕಡಿದಾಳು ಶಾಮಣ್ಣ, ಧನ್ವಂತರಿ ಚಿಕಿತ್ಸೆ, ಕಲ್ಲು ಕರಗುವ ಸಮಯ, ಚಿನ್ನದ ಚೆಂದಿರ ...
READ MORE