ಕಾಡ ನಾಡ ತೋಳಗಳು

Author : ಜಗದೀಶ.ಬ.ಹಾದಿಮನಿ

Pages 100

₹ 120.00




Year of Publication: 2022
Published by: ಪ್ರತೀಕ್ಷಾ ಪ್ರಕಾಶನ
Address: ಹುನಗುಂದ ಬಾಗಲಕೋಟೆ- 587118
Phone: 9880001565

Synopsys

ಕಾಡ ನಾಡ ತೋಳಗಳು ಎಂಬ ಕಥಾ ಸಂಕಲನವು ಜಗದೀಶ, ಬ. ಹಾದಿಮನಿ ಅವರ ಕಥಾ ಸಂಗ್ರಹವಾಗಿದೆ. ಒಟ್ಟಾರೆ ಜಗದೀಶ ಅವರ ಈ ಕಥಾ ಸಂಕಲನವು ದುರಂತ ಬದುಕಿನ ಆಯಾಮಗಳನ್ನು ಹಾಗೂ ಸಮಾಜದ ಸಮಸ್ಯೆಗಳನ್ನು ಚಿತ್ರಿಸುತ್ತ ನಾವಿನ್ಯತೆ ಮೆರೆದಿದೆ. ಕಥೆಗಳಲ್ಲಿ ಬರುವ ಅಲಂಕಾರಗಳು, ಉತ್ತರ ಕರ್ನಾಟಕದಲ್ಲಿ ಬಳಸುವ ಭಾಷೆ, ನುಡಿಗಟ್ಟುಗಳು, ಗಾದೆಮಾತುಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಕಥೆ ಹೇಳುವ ವಿಧಾನಗಳಲ್ಲಾಗಲೀ, ಅಥವಾ ಬಳಸುವ ಭಾಷೆಯಲ್ಲಾಗಲೀ ಅನ್ಯ ಸಾಹಿತಿಗಳ ಪ್ರಭಾವ ಎದ್ದು ಕಾಣುವುದಿಲ್ಲ. ಎಲ್ಲ ಕಥೆಗಳು ಲೇಖಕರ ಕಲಾ ಪ್ರತಿಷ್ಠೆಯ ಮೂಸೆಯಿಂದಲೆ ಹೊರಬಂದಿವೆ ಎಂದೆನಿಸುತ್ತದೆ. ಕಥೆಗಳಲ್ಲಿ ದೀರ್ಘವಾದ ವರ್ಣನೆಗಳಾಗಲೀ, ವೈಚಾರಿಕ ಗೊಂದಲಗಳ ವಿಶ್ಲೇಷಣೆಗಳಾಗಲೀ ಇಲ್ಲವೇ ಇಲ್ಲ. ಆದರೆ ಕಥೆಗಾರರಿಗೆ ಕಥೆ ಹೇಳುವ ತೀವ್ರ ತುಡಿತ ಎದ್ದು ಕಾಣುತ್ತದೆ. ಬರವಣಿಗೆ ಸರಳವಾಗಿದ್ದು, ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ಕಥಾ ನಿರೂಪಣೆಯಲ್ಲಿ ಕಟು ವಾಸ್ತವದ ದರ್ಶನ ಮೇಲುಗೈ ಪಡೆದಿದೆ. ಕಥೆ ಬರೆಯುವ ತಮ್ಮ ಇತಿಮಿತಿಗಳನ್ನು ಕಥೆಗಾರರು ಚೆನ್ನಾಗಿ ತಿಳಿದವರಾಗಿ ಅಚ್ಚುಕಟ್ಟಾಗಿ ಕಥೆಗಳನ್ನು ಹೆಣೆಯುವ ಕೌಶಲ್ಯ ಹೊಂದಿದ್ದಾರೆ ಎಂದು ಡಾ. ಶ್ರೀ ಶೈಲ ಆರ್‌. ಗೋಲಗೊಂಡ ಪುಸ್ತಕದ ಮುನ್ನುಡಿಯಲ್ಲಿ ಹೇಳಿದ್ದಾರೆ.

About the Author

ಜಗದೀಶ.ಬ.ಹಾದಿಮನಿ

ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ  ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ‌ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು:  ...

READ MORE

Related Books