ಆಧುನಿಕ ಕನ್ನಡ ಕತೆಗಾರರಲ್ಲಿ ಪ್ರಮುಖರಾಗಿರುವ ಶಾಂತಿನಾಥ ದೇಸಾಯಿ ಅವರ ಕತೆಗಳು ’ನವ್ಯ’ ಮಾದರಿಯವರು. ಅವರು ರಚಿಸಿದ ’ಮುಕ್ತಿ’ ಕಾದಂಬರಿ ಮೊದಲ ನವ್ಯ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಧುನಿಕ ಸಂವೇದನೆ- ಮನುಷ್ಯ ಸ್ವಭಾವದ ಒಳತೋಟಿಗಳನ್ನು ಕಟ್ಟಿಕೊಡುವ ದೇಸಾಯಿ ಅವರ ಕತೆಗಳು ಓದುಗರಿಗೆ ಪ್ರಿಯವಾಗುತ್ತವೆ. ದೇಸಾಯಿ ಅವರ ಆರು ಪ್ರಕಟಿತ ಸಂಕಲನಗಳಿಂದ ಆಯ್ದ ಪ್ರಾತಿನಿಧಿಕ ಕತೆಗಳನ್ನು ಈ ಸಂಕಲನದಲ್ಲಿ ನೀಡಲಾಗಿದೆ.
ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ...
READ MORE