ಲೇಖಕ ಲೋಹಿತ್ ನಾಯ್ಕ ಅವರ ಕಥಾ ಸಂಗ್ರಹ ʻಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪʼ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಲೇಖಕರ ಹಿಂದಿನ ಎರಡು ಕಥಾ ಸಂಕಲನಗಳು ಈ ವಿಚಾರಗಳನ್ನು ಚರ್ಚಿಸುತ್ತವೆ. ಇದೀಗ ಮೂರನೇ ಕೃತಿಯಲ್ಲಿ ಕೂಡ ಈ ಆಸಕ್ತಿ ಮುಂದುವರೆದಿದೆ. ಮಾನವ ಹಕ್ಕುಗಳು ಕಾಯಿದೆ ದೃಷ್ಟಿಯಿಂದ ಹಾಗೂ ನೈತಿಕ ದೃಷ್ಟಿಯಿಂದ ಎದುರಿಸುವ ಸಮಸ್ಯೆಗಳನ್ನು ಸಣ್ಣ ಕತೆಗಳ ಮೂಲಕ ಚಿತ್ರಿಸಲಾಗಿದೆ.
ವೃತ್ತಿಯಿಂದ ವಕೀಲರಾಗಿರುವ ಲೋಹಿತ ನಾಯ್ಕರ್ ಅವರು ಪ್ರವೃತ್ತಿಯಿಂದ ಕತೆಗಾರ-ಲೇಖಕ. ಅಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕರಾಗಿ ಲೋಹಿತ ನಾಯ್ಕರ ಕಾರ್ಯ ನಿರ್ವಹಿಸಿದ್ದಾರೆ. ಅವರ ಎರಡು ಕಥಾಸಂಕಲ ಪ್ರಕಟವಾಗಿವೆ.ದೃಷ್ಟಿಕೋನ ಮತ್ತು ಕಥಾನಾಯಕಿಯ ಕತೆ. ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ಡಿ.ಕೆ.ನಾಯ್ಕರ್ ಅವರ ಪುತ್ರರು. ...
READ MORE