ಎಂ.ಜವರಾಜ್ ಅವರ ಕಥಾ ಸಂಕಲನ ‘ನವುಲೂರಮ್ಮನ ಕಥೆ’. ಈ ಸಂಕಲನಕ್ಕೆ ಕೃಷ್ಣಮೂರ್ತಿ ಹನೂರ ಮುನ್ನುಡಿ ಬರೆದಿದ್ದಾರೆ. 2009ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2021ರಲ್ಲಿ ಎರಡನೇ ಮುದ್ರಣ ಕಂಡಿದೆ. ಕೃತಿಯ ಒಳಪುಟಗಳಲ್ಲಿ ನೋಡಿಕೊಂಡವರು, ಆಡಿಸುವವರು, ಪ್ರಯಾಣ, ನವುಲೂರಮ್ಮನ ಕಥೆ, ರಾಣಿ, ಬಸಿರಿ, ಬೇಯಿಸಿಕೊಂಡವರು, ಮುಗಿಸಿದವರು, ಕೊನೇ ಚಿತ್ರ ಎಂಬ ಶೀರ್ಷಿಕೆಗಳಿವೆ.
ಲೇಖಕ ಎಂ. ಜವರಾಜ್ ಅವರು ಮೂಲತಃ ಟಿ.ನರಸೀಪುರದವರು. ತಂದೆ ಮಾದಯ್ಯ ತಾಯಿ ತಾಯಮ್ಮ. ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಶಿಕ್ಷಣ ಪೂರೈಸಿದ್ದು ಹುಟ್ಟೂರಿನಲ್ಲೇ. ಮೈಸೂರಿನ ಮುಕ್ತ ವಿವಿ ಯಿಂದ ಇತಿಹಾಸದಲ್ಲಿ ಎಂ.ಎ.ಪದವೀಧರರು. ಪ್ರಸ್ತುತ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಸಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೃತಿಗಳು: ನವೂಲೂರಮ್ಮನ ಕಥೆ (ಕತಾ ಸಂಕಲನ), ಕಿಡಿ (ಕಾದಂಬರಿ) ...
READ MORE