ಜಗದೀಶ ಬ ಹಾದಿಮನಿ ಅವರ ಕತಾ ಸಂಕಲನ ’ಬೆರಳಚಂದ್ರ’. ಕೃತಿಗೆ ಬೆನ್ನುಡಿ ಬರೆದ, ಎಂ. ಡಿ. ಚಿತ್ತರಗಿ, ’ ಕೃತಿಕಾರರ ಅಂತರಂಗದ ಏಕಲವೃನು ಮೂಲಕ್ಕೆ ಧಕ್ಕೆಯಾಗದಂತೆ ನಿಸರ್ಗದ ಮಡಿಲಲ್ಲಿ ಅರಳಿ, ಶಸ್ತಾಭ್ಯಾಸಕ್ಕೆ ಹೊರಳಿ, ಜಾತಿವ್ಯವಸ್ಥೆಯಿಂದ ನರಳಿ ಮೂಲಕ್ಕೆ ಮರಳಿದರೂ ಕೊನೆಯಲ್ಲಿ ಸೇಡಿನ ಬೀಜವಾಗುತ್ತಾನೆ. ಕೆರಳುವ ಕೆಂಡವಾಗುತ್ತಾನೆ.ಕೆಂಡಕ್ಕೆ ಮಳೆಯಾಗಿ, ನವಭಾರತಕ್ಕೆ ಮುನ್ನುಡಿಯಾಗುತ್ತಾನೆ. ಹೊಸ ಚಿಂತನೆಯ ಪರಿಧಿಯಲ್ಲಿ ಮರುರೂಪಗಳನ್ನು ಪಡೆದು ಯಶಸ್ವಿಯಾಗಿರುವ ಕಥಾನಕಗಳಲ್ಲಿ ಇದೂ ಒಂದಾಗಲಿದೆ.’ ಎಂದು ಪ್ರಶಂಸಿದ್ದಾರೆ.
ಲೇಖಕ ಜಗದೀಶ.ಬ.ಹಾದಿಮನಿ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳಮಳ್ಳಿ ಗ್ರಾಮದವರು. ತಂದೆ ಬಸವಂತರಾಯ. ತಾಯಿ - ಧನಪೂರ್ಣ. ಬಾಗಲಕೋಟೆ ಜಿಲ್ಲೆಯ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಶಿಕ್ಷಣ, ಹುನಗುಂದದ ವ್ಹಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಹುನಗುಂದದ ಸರಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ ಪದವಿ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದಾರೆ. ಕೃತಿಗಳು: ...
READ MORE