‘ನಿತ್ಯವಿದು ಪರಿವರ್ತನ’ ಕೃತಿಯು ದಿವ್ಯಾ ಹೆಗಡೆ ಕಬ್ಬಿನಗದ್ದೆ ಅವರ ಕತಾಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು,'ನಿತ್ಯವಿದು ಪರಿವರ್ತನ' ಕೃತಿಯಲ್ಲಿ ಲೇಖಕಿ ಅನೇಕ ಜೀವನ ಮೌಲ್ಯಗಳನ್ನು ಸುಲಲಿತವಾದ ಕಥಾಪ್ರಸಂಗಗಳೊಂದಿಗೆ ನಿರೂಪಿಸಿದ್ದಾರೆ. ಆತ್ಮೀಯತೆಯ ಸಂವಾದ,ಮನೋಜ್ಞವಾದ ದೃಷ್ಟಾಂತ, ವಸ್ತುನಿಷ್ಠವಾದ ತತ್ವೋಪದೇಶ, ಸರಳ-ಸುಂದರವಾದ ನಿರೂಪಣೆ-ಈ ಎಲ್ಲ ಗುಣಗಳಿಂದ ಅಲಂಕೃತವಾದ ಈ ಕೃತಿಯ ಆಕೃತಿಯು ಓದುಗನಿಗೆ ಮನೋಲ್ಲಾಸವನ್ನು ಉಂಟು ಮಾಡುವಂತಿದೆ. ಮೌಲಿಕ ಬರಹಗಳನ್ನೊಳಗೊಂಡಿದೆ ಎಂದು ಪ್ರಶಂಸಿಸಿದ್ದಾರೆ.
ಕಥೆಗಾರ್ತಿ ದಿವ್ಯಾ ಹೆಗಡೆ ಕಬ್ಬಿನಗದ್ದೆ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ , ಯಲ್ಲಾಪುರದ ವೈ. ಟಿ. ಎಸ್. ಎಸ್ ಶಿಕ್ಷಣ ಸಂಸ್ಥೆಯಲ್ಲಿ ಹೈಸ್ಕೂಲ್ ಮತ್ತು ಪಿ.ಯು.ಸಿ ಶಿಕ್ಷಣವನ್ನು ನಂತರ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನ, ಕೃಷಿ ಮತ್ತು ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಕಡೆಗಳಲ್ಲಿ ತಾಳಮದ್ದಳೆ ಹಾಗೂ ಸಭೆ ಸಮಾರಂಭಗಳ ನಿರೂಪಕರಾಗಿಯೂ ಭಾಗವಹಿಸಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ' ಯುವ ವಾಣಿ ' ಕಾರ್ಯಕ್ರಮನ್ನು ನಡೆಸಿಕೊಟ್ಟಿರುತ್ತಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಪ್ರಸ್ತುತ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ನಿತ್ಯವಿದು ...
READ MORE