ಓಬೀರಾಯನ ಕಾಲದ ಕತೆಗಳು

Author : ಬಿ. ಜನಾರ್ದನ ಭಟ್

Pages 656

₹ 350.00




Year of Publication: 2013
Published by: ಕೌಸ್ತುಭಾ ಪ್ರಕಾಶನ
Address: #189, 3ನೇ ಮಹಡಿ, ಇ.ಎ.ಟಿ. ಸ್ಟ್ರೀಟ್, ಬಸವನಗುಡಿ, ಬೆಂಗಳೂರು- 560004
Phone: 9844774531

Synopsys

‘ಓಬೀರಾಯನ ಕಾಲದ ಕತೆಗಳು’ ಲೇಖಕ ಬಿ.ಜನಾರ್ದನ ಭಟ್ ಅವರ ಕತಾಸಂಕಲನ. ಈ ಕೃತಿಗೆ ಕೆ.ಎಲ್. ಕುಂಡಂತಾಯ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಇದೊಂದು ಅಪೂರ್ವ ಕತೆಗಳ ಸಂಕಲನ. ಓ. (ಅಂದರೆ ಓಲ್ಡ್) ಬಿ. (ಅಂದರೆ ಬ್ರಿಟಿಷ್) ರಾಯನ ಕಾಲದ ಕುರಿತಾದ ಕತೆಗಳ ಸಂಕಲನವೇ ಓಬೀ ರಾಯನ ಕಾಲದ ಕತೆಗಳು. ದಕ್ಷಿಣ ಕನ್ನಡದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತ 1800 ರಲ್ಲಿ ಪ್ರಾರಂಭವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸುವವರೆಗೆ ಒಂದೂವರೆ ಶತಮಾನಗಳ ಕಾಲ ಇತ್ತು. ಈ ಜಿಲ್ಲೆಯ ಗದ್ಯ ಸಾಹಿತ್ಯದಲ್ಲಿ ವಸಾಹತು ಶಾಹಿಯ ಖಂಡನೆ ಕಾಣಿಸುವ ಬದಲಿಗೆ ಅದರ ಬಗೆಗೆ ಅಭಿಮಾನವೇ ಕಾಣಿಸುವುದನ್ನು ಸಂಪಾದಕರಾದ ಡಾ.ಬಿ.ಜನಾರ್ದನ ಭಟ್ ತಮ್ಮ ಅಧ್ಯಯನದಿಂದ ಕಂಡುಕೊಂಡು ಆ ಕಾಲದ ಚರಿತ್ರೆಯನ್ನು ಕತೆಗಳ ಮೂಲಕ ಕಟ್ಟಿಕೊಟ್ಟಿರುವ ಮಹತ್ವದ ಸಂಕಲನ ಇದು’ ಎನ್ನುತ್ತಾರೆ ಕುಂಡಂತಾಯ. ಜೊತೆಗೆ ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’, ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’ ಮತ್ತು ಉಡುಪಿಯ. ಶತಮಾನದ ಕತೆಗಳು ಎಂಬ ಸಂಕಲನಗಳ ನಂತರ ಅವರ ವಿಸ್ತೃತವಾದ ಅಧ್ಯಯನದ ಫಲವಾಗಿ ಕನ್ನಡಕ್ಕೆ ದಕ್ಕಿರುವ ಈ ಸಂಪುಟದಲ್ಲಿ ಎಂದಿನಂತೆ ಅವರ ವಿಸ್ತಾರವಾದ ಪ್ರಸ್ತಾವನೆಯೂ ಬಹಳ ಮುಖ್ಯವಾದ ಆಕರ ಸಾಮಗ್ರಿಯಾಗಿ ಪ್ರಸ್ತುತವಾಗಿದೆ ಎನ್ನುತ್ತಾರೆ. ಪೂರಕವಾಗಿ ಕತೆಗಳನ್ನು ಸಂಗ್ರಹಿಸಿ ಪೋಣಿಸಿರುವ ಅವರ ರೀತಿಯೂ ಅನನ್ಯವಾಗಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books