ರಾಜಶೇಖರ ಜೋಗಿನ್ಮನೆ ಅವರ ಕಥಾ ಸಂಕಲನ ”ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’. ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೆಶ ಅವರ ಕೃತಿಯ ಮುನ್ನುಡಿಯಲ್ಲಿ ’ಕಥಾ ಸಂವಿಧಾನ ಹಾಗೂ ನಿರೂಪಣೆ ವಿಶಿಷ್ಟವಾಗಿದೆ. ಇಲ್ಲಿಯ ಎಲ್ಲ 12 ಕಥೆಗಳು ಉತ್ತರ ಕರ್ನಾಟಕದ ನೆಲೆ-ನಿಲುವುಗಳನ್ನು ಹೊತ್ತಿದೆ. ಪ್ರಾದೇಶಿಕ ವಿವರಗಳು ಕ್ವಚಿತ್ತಗಿದ್ದರೂ ಮನಸ್ಸನ್ನು ಹಿಡಿದು ಸೆಳೆಯುತ್ತವೆ. ಜಾಗತೀಕರಣದ ಪ್ರಲೋಭನೆಗೆ ಒಳಗಾದ ಸಂಗತಿಗಳತ್ತ ಕಥೆಗಾರರು ಹೆಚ್ಚು ಮುಖ ಮಾಡಿದ್ದಾರೆ. ಹೀಗಾಗಿ, ಅವರ ಕಥೆಗಳು ನವ್ಯಾತಿನವ್ಯ ಧಾಟಿಯನ್ನು ಹಿಡಿದಿವೆ’ ಎಂದು ಪ್ರಶಂಸಿಸಿದ್ದಾರೆ.
ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ ದೊರೆತಿದೆ.
ರಾಜಶೇಖರ ಜೋಗಿನ್ಮನೆ ಅವರ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಜೋಗಿನ್ಮನೆ ಗ್ರಾಮ. ತಂದೆ ಅಣ್ಣಪ್ಪ ಹೆಗಡೆ, ತಾಯಿ ಕಾಮಾಕ್ಷಿ ಹೆಗಡೆ. ವೃತ್ತಿಯಿಂದ ವಿಜಯವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರು. ಪ್ರವೃತ್ತಿಯಿಂದ ಕಥೆಗಾರರು. ನೀರಿನ ಕುರಿತ ಬರೆಹವೊಂದಕ್ಕೆ ’ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ. ಸಂಗೀತ, ಸಿನಿಮಾ, ನಾಟಕ, ಯಕ್ಷಗಾನ, ಸಾಹಿತ್ಯ- ಇವರ ಆಸಕ್ತಿ ಕ್ಷೇತ್ರಗಳು. ...
READ MORE