‘ಸಾರ್ಥಕ ಬದುಕಿಗೆ 100 ಸ್ಪೂರ್ತಿ ಕತೆಗಳು’ ಹಿರಿಯ ಲೇಖಕ ನಾಗರಾಜರಾವ್ ಎಂ.ವಿ ಅವರ ಕತಾ ಸಂಕಲನ. ಎರಡೇ ಪುಟಗಳಲ್ಲಿ ಮುಗಿಯುವ ಪುಟ್ಟ ಕತೆಗಳು ಬದುಕಿಗೆ ಅದಮ್ಯ ಚೇತನವನ್ನು ತುಂಬುತ್ತವೆ. ಇವು ಸ್ಫೂರ್ತಿ ನೀಡುವುದಲ್ಲದೆ ಅರ್ಥಪೂರ್ಣವಾಗಿ ಬದುಕಲು ನಮ್ಮನ್ನು ಪ್ರೇರೇಪಿಸುತ್ತವೆ. ಬದುಕಿನ ಬಗೆಗೆ ನಾವು ಕಳೆದುಕೊಂಡ ಶ್ರದ್ಧೆಯನ್ನು ಮತ್ತೆ ದಯಪಾಲಿಸುತ್ತವೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು 242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ. ಅನುವಾದಿತ ಕೃತಿಗಳು : ಜೇಮ್ಸ್ ಹ್ಯಾಡ್ಲಿ ...
READ MORE