”ಸಾವಿರ ರೆಕ್ಕೆಯ ಪುಸ್ತಕ’ ನ್ಯಾನೊ ಕತೆಗಳ ಕೃತಿ. ಇಲ್ಲಿನ ಪ್ರತಿ ಕತೆಯು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆದ ಘಟನೆಗಳೇ ಅಂತಲೂ ಅನ್ನಿಸಬಹುದು. `ಹಾಡು ಹಳೆಯದಾದರೇನು?’ ಕತೆಯಲ್ಲಿ ಗಂಡ ಸತ್ತ ನಂತರ ಅವಳ ಒಳಗಿನ ಹಾಡು ಹಕ್ಕಿಯೊಂದು ಗರಿಗೆದರಿ ಹೊಸದಾಗುವ ಪರಿಯಲ್ಲಿ ಹೆಣ್ಣು ಮತು ಅಭಿವ್ಯಕ್ತಿಯ ಸಾಧ್ಯತೆ, ಸಾಮಾಜಿಕ ನಿರ್ಬಂಧ, ಗಂಡಿನ ಅಹಂ ಎಲ್ಲವೂ ಸೇರಿಕೊಳ್ಳುತ್ತದೆ. `ನಗು ಮಲ್ಲಿಗೆ’ ಕತೆ ಕಾಶ್ಮೀರಿ ಪಂಡಿತರ ಕುಟುಂಬದ ಒಬ್ಬ ಹೆಣ್ಣು ಅಲ್ಲಿ ಗಲಭೆ ನಡೆದಾಗ ಏಕಾಏಕಿ ಮನೆ ಮಠ ಆಸ್ತಿ ಎಲ್ಲ ತೊರೆದು ರೈಲಿನಲ್ಲಿ ಕುರಿಗಳ ಹಾಗೆ ತುಂಬಿಕೊಂಡು ಬೆಂಗಳೂರಿಗೆ ಬಂದ ಸಂಗತಿಯನ್ನು ನನ್ನ ಹತ್ತಿರ ಹೇಳಿಕೊಂಡು ಅತ್ತಿದ್ದರು. ಆಕೆ ಹಾಗೆ ಬರುವಾಗ ಕಾಶ್ಮೀರದಿಂದ ಏನನ್ನು ತರಬೇಕು ಎಂದು ತುಂಬಾ ಯೋಚಿಸಿ ಅಲ್ಲಿ ಬೆಳೆವ ಒಂದು ಮರದ ಬೀಜವನ್ನು ತಂದಿದ್ದರಂತೆ. ಅದೀಗ ಹೂವು ಬಿಡುತ್ತಿದೆ. ಅದರಲ್ಲಿ ಅರಳುವ ಹೂವು ಅವರ ಭಾವಕೋಶದಲ್ಲಿರುವ ಕಾಶ್ಮೀರವನ್ನು ಮತ್ತೆ ಜೀವಂತವಾಗಿರಿಸುತ್ತಿದೆ ಎಂದಿದ್ದರು. ಮತ್ತೆ ವಾಪಾಸು ಅಲ್ಲಿಗೆ ಹೋಗುವ ಮನಸ್ಸು ಅವರಿಗಿಲ್ಲ. ಆ ಅವಮಾನ ಸಂಕಟಗಳು ಅವರನ್ನು ಬಿಡದೆ ಹಿಂಬಾಲಿಸುತ್ತಿದೆ. ಕಾಶ್ಮೀರ ಬೇಕು, ಅವಮಾನ ಬೇಡ ಎಂದಾಗ ತನ್ನ ಪರಿಸರದಲ್ಲಿ ಕಾಶ್ಮೀರವನ್ನು ಸೃಷ್ಟಿಸಿಕೊಳ್ಳಲು ಮುಂದಾಗಿದ್ದರು. ಹೆಣ್ಣು ಮತ್ತು ಅವಳ ಭಾವಕೋಶದಲ್ಲಿ ಅಡಗಿರುವ ಬೀಜರೂಪಿ ಸಂಗತಿಗಳು ಹೀಗೆ ಮತ್ತೆ ಬೆಳೆದು ಮರವಾಗಿ ಮೂಲವನ್ನು ನೆನಪಿಸುತ್ತಲೇ ಇರುತ್ತದೆ. ಹೀಗೆ ಇಲ್ಲಿನ ಪ್ರತಿಯೊಂದು ವಿಭಿನ್ನವಾಗಿವೆ.
ಬರಹಗಾರ ವಿ.ಗೋಪಕುಮಾರ್ ಅವರು ಹುಟ್ಟಿದ್ದು ಮಂಡ್ಯದಲ್ಲಿ. ಕನ್ನಡ ಮತ್ತು ಇಂಗ್ಲಿಷ್ ಪದವೀಧರರು. ಫೋಟೊಗ್ರಫಿ, ನ್ಯಾನೋ ಕತೆಗಳ ರಚನೆ, ಕನ್ನಡ ಮತ್ತು ಮಲೆಯಾಳಂನಲ್ಲಿ ಸಣ್ಣ ಕತೆಗಳ ರಚನೆ, ಕಿರುಚಿತ್ರಗಳು ಮತ್ತು ಸಾಕ್ಷ್ಯಾಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ ಎರಡು ಚಿತ್ರಗಳು ಕಿರುಚಿತ್ರಕ್ಕೆ ಅತ್ಯುತ್ತಮ ಪ್ರಾಯೋಗಿಕ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕೃತಿಗಳೆಂದರೆ ಸಾವಿರ ರೆಕ್ಕೆಗಳ ಪುಸ್ತಕ, ಬೆಳದಿಂಗಳು ಮತ್ತು ಮಳೆ, ವಿಜಯೀಭವ ಹಾಗೂ ಎರಡು ಹನಿ ಮಳೆಯ ಮೋಡ ಮುಂತಾದವು. ...
READ MORE