ಬದುಕು ಇನ್ನೂ ಇದೆ ರನ್ನರಾಜ ಅವರ ಸೋತವನ ಸಾವಿರ ಕಥೆಗಳು ಪುಸ್ತಕದಂತ ಕೃತಿಯಾಗಿದೆ. ಪುಸ್ತಕ ಲೋಕದ ಇತಿಹಾಸದಲ್ಲಿ ಹೊಸದೊಂದು ಹೆಜ್ಜೆ ಇಟ್ಟ ಲೇಖಕರು ತಮ್ಮ ಮಸ್ತಕಗಳಿಗೆ ಮುನ್ನುಡಿ, ಬೆನ್ನುಡಿ, ಬಿಡುಗಡೆ ಸಮಾರಂಭ ಯಾವುದೂ ಇಲ್ಲದೆ ಕೇವಲ ಪುಸ್ತಕ ಮುದ್ರಿಸಿ ಹೊರತಂದು ಓದುಗರೇ ಪುಸ್ತಕದ ಬಗ್ಗೆ ಪ್ರಚಾರ ಮಾಡಿ ಸತತ ಟಾಪ್ ನಂ.1 ಪುಸ್ತಕವಾಗಿ ಸೋತವನ ಸಾವಿರ ಕಥೆಗಳು' ಪುಸ್ತಕದಂತೆಯೇ ಈ ಪುಸ್ತಕಕ್ಕೂ ಮುನ್ನುಡಿ, ಬೆನ್ನುಡಿ ಇರುವುದಿಲ್ಲ. ಆದರೆ ಈ ಪುಸ್ತಕವನ್ನು ಹೊರತರುವ ಮುನ್ನ ಮೊಬೈಲ್‌ನಲ್ಲಿಯೇ ಬಿಡುಗಡೆ ಮಾಡಿ ಓದುಗರ ಅಭಿಪ್ರಾಯ ಪಡೆಯಲಾಗಿದೆ. ಹಾಗೆ ಪ್ರತಿ ಮುದ್ರಣದಲ್ಲಿಯೂ ವಿಭಿನ್ನ ಓದುಗರ ಅಭಿಪ್ರಾಯವನ್ನೇ ಮುದ್ರಿಸಿ ಹೊರತಂದು ಓದುಗರಿಗೆ ವೇದಿಕೆ ಸೃಷ್ಟಿಸುವುದರ ಜೊತೆಗೆ ಪುಸ್ತಕದ ಬಗ್ಗೆ ಹೊಸ ಓದುಗರಿಗೆ ಸ್ಪಷ್ಟ ಮಾಹಿತಿ ನೀಡಬೇಕೆಂಬುದು ಲೇಖಕರ ಉದ್ದೇಶ. ಅದಕ್ಕಾಗಿ ಪ್ರತಿ ಮುದ್ರಣದಲ್ಲಿಯೂ ಹೊಸ ಹೊಸ ಓದುಗರ ವಸ್ತುನಿಷ್ಟ ವಿಭಿನ್ನ ಅಭಿಪ್ರಾಯಗಳನ್ನು ನೀಡಲಾಗಿದೆ. ಎಂಬುದು ಓದುಗರ ನುಡಿಯಾಗಿದೆ.
ಲೇಖಕ ರನ್ನರಾಜ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳದವರು. ಕಡೂರಿನ ಗಿರಿಯಾಪುರದಲ್ಲಿ ಪ್ರೌಢಶಿಕ್ಷಣ, ತುಮಕೂರಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಬಿ.ಎಸ್.ಸಿ. ನಂತರ ಗುಲಬರ್ಗಾ ವಿ.ವಿ.ದಿಂದ ಗಣಿತ ವಿಷಯದಲ್ಲಿ ಎಂ.ಎಸ್.ಸಿ. ಪೂರ್ಣಗೊಳಿಸಿದರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃತಿಗಳು: ಅಪ್ಪನೆಂದರೆ ದೇವರಲ್ಲ, ದುಡ್ಡು ಪ್ಲಸ್ ಮೈಂಡು, ಸೋತವನ ಸಾವಿರ ಕಥೆಗಳು, ಪ್ರೀತಿ ಮತ್ತು ಸಾರ್ಥಕತೆ ಇತ್ಯಾದಿ ...
READ MORE