ಮಂಗನ ಬ್ಯಾಟೆ

Author : ಕಲ್ಕುಳಿ ವಿಠಲ್ ಹೆಗ್ಗಡೆ

Pages 284

₹ 300.00




Year of Publication: 2013
Published by: ವಿಲೀನ ಪ್ರಕಾಶನ

Synopsys

ಲೇಖಕ ಕಲ್ಕುಳಿ ವಿಠಲ್‌ ಹೆಗ್ಗಡೆ ಅವರ ಪರಿಸರಕ್ಕೆ ಸಂಬಂಧಪಟ್ಟ ಕೃತಿ ʻಮಂಗನ ಬೇಟೆʼ- ಮಲೆನಾಡ ಪರಿಸರ ಕಥನʼ. ಪುಸ್ತಕದಲ್ಲಿ ಪರಿಸರದ ಅನೇಕ ಜೀವ ವೈವಿಧ್ಯಗಳ ಬಗ್ಗೆ ವಿವರಗಳಿವೆ. 'ಮಂಗನ ಬ್ಯಾಟೆʼ ಅನ್ನುವುದು ಇಲ್ಲಿ ಬರುವ ಒಂದು ಕಥೆಯ ಶೀರ್ಷಿಕೆಯಾಗಿದೆ. ಸಿದ್ಧ ಎನ್ನುವ ವ್ಯಕ್ತಿ ಇಡೀ ಪುಸ್ತಕದ ಕೇಂದ್ರ ಪಾತ್ರವಾಗಿದೆ. ಪ್ರಕೃತಿಯೊಂದಿಗೆ ಬೆರೆದು ಮೀನು- ಏಡಿ ಹಿಡಿಯುತ್ತಾ, ಜೇನು ಕೀಳುತ್ತಾ ಅನೇಕ ಬಗೆಯ ಔಷಧಿಯುಕ್ತ ಬಳ್ಳಿಗಳು ಬೇರುಗಳನ್ನು ಕಾಡು ಪದಾರ್ಥಗಳನ್ನು ಸಂಗ್ರಹಿಸುವ ಈತನ ಕತೆ ಹೇಳುತ್ತಾ ಕಥೆ ಬೇರೆ ಮಜಲಿಗೆ ಸಾಗುತ್ತದೆ. ಹೀಗೆ ಮಲೆನಾಡ ಕುರಿತಾದ ವಿಷಯಗಳು, ಅಮೂಲವ್ಯವಾದ ವಿವರಗಳೂ, ಉಪಕತೆಗಳೂ, ಹಾಸ್ಯಪ್ರಸಂಗಗಳೂ, ಈ ಕಥನದಲ್ಲಿವೆ.

About the Author

ಕಲ್ಕುಳಿ ವಿಠಲ್ ಹೆಗ್ಗಡೆ

ಕಲ್ಕುಳಿ ವಿಠಲ್‌ ಹೆಗ್ಗಡೆ ಅವರು ಮೂಲತಃ ಮಲೆನಾಡಿನವರು. ಅಲ್ಲಿನ ಭಾಗಗಳಲ್ಲಿ ಯು.ಆರ್. ಅನಂತಮೂರ್ತಿ, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಅವರ ಜತೆ ಅನೇಕ ರೈತಪರ ಹೋರಾಟ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನಜಾಗೃತಿ ಮೂಡಿಸಿದ್ದರು. ಬರವಣಿಗೆ ಇವರ ಹೀಗೆ ಜನಪ್ರಿಯ ಹೋರಾಟಗಾರರೆನಿಸಿಕೊಂಡಿರುವ ವಿಠಲ್‌ ಅವರ ʻಮಂಗನ ಬೇಟೆʼ ಪರಿಸರ ಕಥನ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ...

READ MORE

Related Books