ಸೃಜನ್ ಎಂದೇ ಹೆಸರಾದ ಪಿ. ಶ್ರೀಕಾಂತ್ ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕಮಲಾಪುರಂನಲ್ಲಿ. ಓದಿದ್ದು ಕೊಪ್ಪಳ, ಸಂಡೂರು ಮತ್ತು ಬಳ್ಳಾರಿಯಲ್ಲಿ. ಬಿಇ ಸಿವಿಲ್ ಪದವೀಧರರಾದ ಸೃಜನ್ ಸುಮಾರು 15 ವರ್ಷಗಳ ಕಾಲ ಎಂಜಿನಿಯರ್ ಆಗಿ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಳೆತನದಿಂದಲೂ ಕಲೆ,ಸಿನಿಮಾ ಮತ್ತು ಸಾಹಿತ್ಯದ ಕುರಿತು ಒಲವು. 1988ರಿಂದಲೂ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ಇವರು, ಕಾಸರಗೋಡು,ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಇವರ ವ್ಯಂಗ್ಯಚಿತ್ರಗಳ ಪ್ರದರ್ಶನ ಕಂಡಿವೆ. ಮುಂಬೈನ ’ಜಿಂದಾಲ್ ಆರ್ಟ ಫೌಂಡೇಶನ್’ ನಡೆಸಿದ ಕಲಾಸ್ಪರ್ಧೆಯಲ್ಲಿ ’ ಅಪನಾ ಆರ್ಟಿಸ್ಟ್’ ಪುರಸ್ಕಾರಕ್ಕೆ ಭಾಜನರಾದ ಸೃಜನ್ ಅವರ 18 ಕಲಾಕೃತಿಗಳಿಗೆ ಶಾಶ್ವತ ಡಿಸ್‌ಪ್ಲೆ ...
READ MORE