ಕಥೆಗಾರ ಲಿಂಗಾರೆಡ್ಡಿ ಶೇರಿ ಅವರ ಕಥೇಗಳ ಸಂಕಲನ-ಹರಿದ ಸೆರಗು.ಬದುಕಿನ ವೈಯಕ್ತಿಕ ಹಾಗೂ ವೃತ್ತಿಯ ಅನುಭವಗಳು ಸೇರಿದಂತೆ ಗ್ರಾಮೀಣ ಬದುಕು, ಬರಗಾಲದ ಚಿತ್ರಣ, ರಾಜಕೀಯ ಒಳಸುಳಿಗಳು, ಆಸ್ತಿ ವಹಿವಾಟು ಇತ್ಯಾದಿ ಕಥಾ ವಸ್ತುಗಳಾಗಿವೆ.ಹರಿದ ಸೆರಗು, ಮಿಯಾಂವ್ ರುದ್ರೇಶಿ, ಕಾಗಿಣಾ ಹರಿಯುತ್ತಲಿದೆ, ವಿಪರ್ಯಾಸ, ಬಂದೂಕಿನ ನಳಿಕೆಯಲ್ಲಿ, ಜಗಳ, ರಾಗದ್ವೇಷಗಳು ಮೀಟಿದಾಗ ಹೀಗೆ ವಿವಿಧ ಶೀರ್ಷಿಕೆಯ ಕಥೆಗಳು ಸಾಮಾಜಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ರೂಪುಗೊಂಡಿವೆ. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. ಲೇಖಕಿ ಸಂಧ್ಯಾ ಹೊನಗುಂಟಿಕರ್ ಅವರು ಕೃತಿಯ (ರೆಡ್ಡಿ ಬಳಗ-ಪುಸ್ತಕ ವಿಮರ್ಶೆ) ಕುರಿತು ‘ಇಲ್ಲಿಯ ಕಥೆಗಳು ಹೊಸತನಕ್ಕೆ ತುಡಿಯುತ್ತವೆ. ಉತ್ತಮಿಕೆಗೆ ಧೇನಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಲಿಂಗಾರೆಡ್ಡಿ ಸೇರಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು. ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...
READ MORE