ಋತು ಸಂಕ್ರಮಣ ಮತ್ತು ಇತರ ಕಥೆಗಳು

Author : ಗೀತಾ ಶೆಣೈ

Pages 112

₹ 140.00




Year of Publication: 2024
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಋತು ಸಂಕ್ರಮಣ ಮತ್ತು ಇತರ ಕಥೆಗಳು’ ಗೋಕುಲದಾಸ ಪ್ರಭು ಅವರ ಕೊಂಕಣಿ ಮೂಲ ಕೃತಿಯಾಗಿದ್ದು, ಡಾ. ಗೀತಾ ಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸಂಕಲನದ ಬಹುಪಾಲು ಕಥೆಗಳು ಸ್ತ್ರೀಪಾತ್ರ ಕೇಂದ್ರಿತವಾಗಿವೆ. ಈ ಕಥೆಗಳಲ್ಲಿ ಎಲ್ಲ ವಯೋಮಾನದ, ಎಲ್ಲ ವರ್ಗಗಳ ಮಹಿಳೆಯರಿದ್ದಾರೆ. ಶಾಲಾ ವಿದ್ಯಾರ್ಥಿನಿ, ಶಿಕ್ಷಕಿ, ಎಳೆತಾಯಿ, ಮುದಿತಾಯಿ, ಶೋಕಭರಿತ ತಾಯಿ, ಹೆಣ್ಣಾಳು, ಪರಿತ್ಯಕ್ಕೆ, ಆದರ್ಶ ಸೋದರಿ, ಆದರ್ಶ ಪತ್ನಿ ಹೀಗೆ. ಈ ಹೆಣ್ಣುಗಳ ಮಾನಸಿಕ ತುಮುಲವನ್ನು, ದೈಹಿಕ ನೋವನ್ನು ಅನಾವರಣಗೊಳಿಸಿ ಅದಕ್ಕೆ ಕಾರಣವಾದಂತಹ ಸಾಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಈ ಲೇಖಕ ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಓದುಗರಿಗೇ ಬಿಟ್ಟು ಕೊಡುತ್ತಾರೆ. ಸೂರ್ಯನಷ್ಟೇ ನಿಖರವಾದ ದಿನಚರಿಯನ್ನು ಹೊಂದಿದ ಕಾಯಕನಿರತೆ ಮುಂಡಿಗೆ, ಆಸರೆ ಬೇಡುತ್ತಾ ಮನೆಮನೆ ಅಲೆಯುವ ವ್ಯಾಧಿಗ್ರಸ್ತೆ ದುರಪದಳಿಗೆ ಮತ್ತು ಬಾರದ ಗಂಡನ ನಿರೀಕ್ಷೆಯಲ್ಲಿ ಸುದೀರ್ಘ ಕಾಲ ಕಳೆದ ಸಾವತ್ರಕ್ಕನಿಗೆ ಒದಗಿ ಬರುವ ಆಘಾತಕಾರಿ ಅಂತ್ಯಕ್ಕೆ ಹೊಣೆ ಯಾರು ಎನ್ನುವುದು ಇಲ್ಲಿ ಮಹತ್ವದ ಪ್ರಶ್ನೆಯಾಗುತ್ತದೆ. ಯಾರೋ ಮಾಡಿದ ತಪ್ಪಿಗೆ ಯಾರೋ ತಲೆ ಕೊಡಬೇಕಾದ ದುರಂತ ಕಾಣಿಸಿಕೊಂಡಾಗ, ಅಪರಾಧಿ ಮನೋಭಾವ ಕಾಡುವುದು ಬಲಿಪಶುಗಳಲ್ಲಿಯೇ ವಿನಾ ತಪ್ಪಿತಸ್ಥರಲ್ಲಿ ಅಲ್ಲ ಎನ್ನುವುದನ್ನು 'ಏಕಾಂಗಿ ಸಂಜೆ' ಮತ್ತು 'ಗಾಯ' ಕಥೆಗಳು ನಿರೂಪಿಸುತ್ತವೆ. . ಅತ್ತಿಗೆ-ಮೈದುನ, ಅಕ್ಕ-ತಮ್ಮನ ನಡುವಿನ ನಿಷ್ಕಲ್ಮಷ ಮತ್ತು ನಿಸ್ವಾರ್ಥದ ಸಂಬಂಧವನ್ನು ಈ ಲೇಖಕ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಇಲ್ಲಿ ಕ್ರಿಯಾಶೀಲ ಲೌಕಿಕ ಬದುಕಿನ ಅಂತ್ಯದ ಬಳಿಕ ಜೀವನದ ಉತ್ತರಾರ್ಧದಲ್ಲಿ ಮನುಷ್ಯನನ್ನು ಕಾಡುವ ಏಕಾಂಗಿತನ ಹಾಗೂ ಚಡಪಡಿಕೆಯ ಅಶಾಂತ ಮನೋಧರ್ಮಕ್ಕೆ ಪರಿಹಾರಾತ್ಮಕವಾಗಿ ವಾನಪ್ರಸ್ಥ ಕೈಗೊಳ್ಳುವ ಯಾಜ್ಞವಲ್ಕರ ನಿರ್ಧಾರ ಮತ್ತು ವಿರಕ್ತಿಯೇ ಮೂರ್ತೀಭವಿಸಿದಂತಿರುವ ಗೊಮ್ಮಟೇಶ್ವರನ ಪ್ರತಿಮೆಯ ಸನ್ನಿಧಿಯನ್ನು ಬಹಳ ಉತ್ತಮ ರೀತಿಯಿಂದ ವಿವರಿಸಲಾಗಿದೆ ಎನ್ನುತ್ತಾರೆ ಅನುವಾದಕಿ ಗೀತಾ ಶೆಣೈ. 

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books