ದಜ್ಜಾಲ

Author : ಫಕೀರ್ ಮುಹಮ್ಮದ್ ಕಟ್ಪಾಡಿ

Pages 134

₹ 100.00




Year of Publication: 2000
Published by: ಸಿ.ವಿ.ಜಿ ಪಬ್ಲಿಕೇಷನ್ಸ್ಸ್
Address: ನಂ.277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-560058.
Phone: 9341258142

Synopsys

‘ದಜ್ಜಾಲ’ ಫಕೀರ ಮಹಮ್ಮದ್‌ ಕಟ್ಪಾಡಿ ಅವರ ಕಥಾಸಂಕಲನವಾಗಿದೆ. ಪರಸ್ಪರ ಸಂಶಯದ ಸುಳಿಗೆ ಸಿಕ್ಕಿ ಜಾತಿ ಮತಗಳ ಹೆಸರಿನಲ್ಲಿ ಬಡಿದಾಡುವ ಹಿಂದೂ ಮುಸ್ಲಿಂ ಸೋದರರ ಬದುಕಿನ ಕ್ಷಣಗಳು ಈ ಕಥೆಗಳನ್ನು ರೂಪಿಸಿವೆ. ಮಾನವೀಯ ಸಂಬಂಧದ ಜಾಗದಲ್ಲಿ ರಾಕ್ಷಸೀ ಪ್ರವೃತ್ತಿ ಆಕ್ರಮಿಸಿದಾಗ ಸಂಭವಿಸುವ ಅನಾಹುತ ಸರಿಪಡಿಸಲಾರದ್ದು. ಕೋಮುಗಲಭೆಗಳಲ್ಲಿ ತೊಡಗುವ ಜನರ ಕೆಟ್ಟ ಮುಖಗಳನ್ನಿಲ್ಲಿ ಕಾಣಬಹುದು. ಇಲ್ಲಿನ ಹತ್ತು ಕಥೆಗಳಲ್ಲಿ ಐದು ಕಥೆಗಳು ದಿನಪತ್ರಿಕೆಗಳಲ್ಲಿ ಆಗಾಗ ರೋಚಕ-ತಟಸ್ಥ ಮುಂತಾದ ಹಲವು ತೆರನಲ್ಲಿ ವರದಿಯಾಗುವ, ಈಚಿನ ವರ್ಷಗಳಲ್ಲಿ ದೇಶದಲ್ಲಿ ಸಂಭವಿಸುತ್ತಿರುವ ಇಸ್ಲಾಂ ಸಮಾಜದ ಕೌಟುಂಬಿಕ ಬದುಕನ್ನು ತುಂಬು ಆಪ್ತತೆಯಲ್ಲಿ ಚಿತ್ರಿಸುತ್ತವೆ. ‘ದಜ್ಜಾಲ’, ಮತ್ತು ‘ಒಸರು’ ಕಥೆಗಳು ಇಸ್ಲಾಂ ಸಂಸ್ಕೃತಿಯೊಳಗಿನ ಮಿಥ್ ಗಳೆಡೆಗೆ ಮುಖ ಮಾಡಿರುವುದರಿಂದಲೇ ಧ್ವನಿಪೂರ್ಣತೆಯನ್ನೂ ಹೊಸತನವನ್ನೂ ತಂದುಕೊಂಡಿವೆ. ಐಸಾಕ್ ಬಾಷೆವಿಸ್ ಸಿಂಗರ್ ಮತ್ತು ಮಾರ್ಕ್ವಿಜ್ ನಂಥ ಕಥೆಗಾರರು ಮಿಥ್ ಗಳನ್ನು ದುಡಿಸಿಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಸಾಹಿತ್ಯದಲ್ಲಿ ತಂದಿರುವ ಹೊಸತನವನ್ನು ಇಲ್ಲಿ ನೆನಯಬಹುದು. 

About the Author

ಫಕೀರ್ ಮುಹಮ್ಮದ್ ಕಟ್ಪಾಡಿ
(25 June 1949)

ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...

READ MORE

Related Books