ಪಾನಿಪೂರಿ ಮತ್ತು ಇತರೆ ಕಥೆಗಳು- ಲೇಖಕಿ ಭಾಗ್ಯರೇಖಾ ದೇಶಪಾಂಡೆ ಅವರ ಮೊದಲ ಕಥಾ ಸಂಕಲನ. ಹೊಸತನದ ಮೆರುಗು ಹಾಗೂ ಲೋಕಾನುಭವದ ಒಟ್ಟು 11 ಕಥೆಗಳಿವೆ. ಪಾನಿಪುರಿ, ನಾದಿರಾ ಬುಟೀಕ್, ಕಾಕಸಂದೇಶ, ಸ್ವಾಮಿಗಳ ದರ್ಶನ, ವಲಸೆ ಹಕ್ಕಿ, ಮಾದೇಶನ ಮೊಬೈಲ್, ಎಲ್ಲಿಗೆ ಓಟ?, ಒಂದು ಪತ್ರ ಹೀಗೆ ವಿಭಿನ್ನವಾದ ಕಥೆಗಳಿವೆ. ವಿಶಿಷ್ಟವಾದ ನಿರೂಪಣಾ ಶೈಲಿಯಿಂದ ಓದುಗರ ಕುತೂಹಲ ಹೆಚ್ಚಿಸುತ್ತವೆ.
ಸಾಹಿತಿ ಡಾ. ವಸುಂಧರಾ ಭೂಪತಿ ಕೃತಿಗೆ ಮುನ್ನುಡಿ ಬರೆದು ‘ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆಯು ಯಾವ ನಿಟ್ಟಿನಲ್ಲಿ ಆಗುತ್ತದೆಂಬುದಕ್ಕೆ ಇಲ್ಲಿನ ಕೃತಿಗಳು ಸಾಕ್ಷಿಯಾಗಿವೆ. ಲೇಖಕಿಯು ಅನುಭವನಿಷ್ಟತೆಯಿಂದ ಪ್ರಾಮಾಣಿಕವಾಗಿ ತಮಗೆ ದಕ್ಕಿರುವ ವೇದನೆ, ಸಂವೇದನೆಗಳನ್ನು ಕಥಾರೂಪದಲ್ಲಿ ನೀಡಿರುವುದು ಶ್ಲಾಘನೀಯ’ ಎಂದು ಪ್ರಶಂಸಿದ್ದಾರೆ.
ಲೇಖಕಿ ಭಾಗ್ಯರೇಖಾ ದೇಶಪಾಂಡೆ ಮೂಲತಃ ಹುಬ್ಬಳ್ಳಿಯವರು. ವೃತ್ತಿಯಿಂದ ಸಾಫ್ಟವೇರ್ ಎಂಜಿನಿಯರ್. ಇವರ ಕಥೆ, ಚುಟುಕು ಲೇಖನಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಕೃತಿಗಳು: ವಿಜ್ಞಾನಿ ಆರ್. ರಾಜಲಕ್ಷ್ಮಿ(ಆತ್ಮ ಚರಿತ್ರೆ- ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ) ಮಂಡೋದರಿ (ಪೌರಾಣಿಕ ಕಾದಂಬರಿ, ಲೇಖಕಿಯರ ಸಂಘದ ಕಾಕೋಳು ಸರೋಜಮ್ಮ ದತ್ತಿ ಪ್ರಶಸ್ತಿ ಲಭಿಸಿದೆ.), ಪಾನಿಪುರಿ ಮತ್ತು ಇತರ ಕಥೆಗಳು (ಕಥಾ ಸಂಕಲನ), ...
READ MORE