’ಗಂಡಕೀ ಜೋನ್’ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ಪ್ರಕಟವಾದ ಕಾಣದ ರಾಘವ ಅವರ ಕಥೆಗಳ ಸಂಕಲನ. ಈ ಕೃತಿಯಲ್ಲಿ ’ಒಂದು ಟಾಯ್ಲೆಟಿನ ಹಳೇ ಕಥೆ’, ’ಪಾಂಪ್ಲೆಟ್ ಹುಡುಗ’, ’ಇಂಬಳಗಳು’, ’ಮಾತನಾಡುವ ಕಡಲು’, ’ಮಂಪರಿನ ಪರದೆಯಾಚೆ’ ಮುಂತಾದ ಕುತೂಹಲಕರ ಕಥೆಗಳಿವೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಚಿಪಗೇರಿಯವರಾದ ರಾಘವ ಅವರು ಬಾಲ್ಯ ಕಳೆದದ್ದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ. ತಂದೆ ವಿದ್ವಾನ್ ನರಹರಿ ಕೇಶವಭಟ್ ಅವರು ನಿವೃತ್ತ ತರ್ಕಶಾಸ್ತ್ರ ಸಹಪ್ರಾಧ್ಯಾಪಕರು ಮತ್ತು ಸಂಸ್ಕೃತ ಸಾಹಿತಿ. ತಾಯಿ ಸುಮಂಗಲಾ ಭಟ್. ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಆಯುರ್ವೇದ ವೈದ್ಯ ಪದವಿ ಪಡೆದ ರಾಘವ ಅವರು ಬೆಂಗಳೂರಿನ ಶ್ರೀನಗರದಲ್ಲಿ ‘ನಮನ ಆಯುರ್ವೇದ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಾರೆ. ಸಂಗೀತ- ಚಾರಣದಲ್ಲಿ ಆಸಕ್ತಿ ಹೊಂದಿರುವ ರಾಘವ ಅವರು ಮೊದಲ ಮಳೆಯ ಮಣ್ಣು ಕಥಾ ಸಂಕಲನ ಪ್ರಕಟಿಸಿದ್ದಾರೆ. ...
READ MORE