ಖ್ಯಾತ ಲೇಖಕ ರಾಜಶೇಖರ ಭೂಸನೂರಮಠ ಅವರ ಕೃತಿ-ವೈಜ್ಞಾನಿಕ ಕಥೆಗಳು. ಈ ಎಲ್ಲ ಕಥೆಗಳು ಕನ್ನಡಕ್ಕೆ ಅನುವಾದಗೊಂಡು, ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಪಾಶ್ಚಿಮಾತ್ಯ ವೈಜ್ಞಾನಿಕ ಕಥಾ ಸಾಹಿತ್ಯಕ್ಕೆ ಹಿಡಿದ ಪ್ರಾತಿನಿಧಿಕ ಕೃತಿ ಎಂದೇ ಪರಿಗಣಿಸಲಾಗಿದೆ. ಪಾಶ್ಚಾತ್ಯ ಲೇಖಕರು ವೈಜ್ಞಾನಿಕ ಮಾಹಿತಿಯನ್ನು ಸಾಹಿತ್ಯದಲ್ಲಿರಿಸಿದ ಪರಿಯ ವೈವಿಧ್ಯಮಯ ಅಧ್ಯಯನಕ್ಕೂ ಈ ಕೃತಿ ಉಪಯುಕ್ತವಾಗಿದೆ.
ಕವಿರುದ್ರ ಕಾವ್ಯ ನಾಮಾಂಕಿತ ಆರ್.ಸಿ. ಭೂಸನೂರಮಠ (ರಾಜಶೇಖರ ಭೂಸನೂರಮಠ) ಅವರು ಧಾರವಾಡ ಜಿಲ್ಲೆಯ ಕೌಜಲಗಿಯವರು. ಹುಟ್ಟಿದ್ದು 1925 ಡಿಸೆಂಬರ್ 9 ರಂದು. ತಾಯಿ ಚನ್ನವೀರಮ್ಮ, ತಂದೆ ಚನ್ನವೀರಯ್ಯ. ಕೌಜಲಗಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ಹಿಂದಿ ವಿಶಾರದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ರಾಣೆಬೆನ್ನೂರು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕರ್ನಾಟಕ ಕಾಲೇಜಿನಿಂದ ಪದವಿ ಪಡೆದ ನಂತರ ದೇಶದ ನಾನಾ ಭಾಗಗಳ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು. ಪ್ರಮುಖ ಕೃತಿಗಳು: ಜೆಂಗೊಡ, ಕನಸಿನ ರಾಣಿ' (ಕವನಸಂಕಲನ), ಭಕ್ತಿ ಭಂಡಾರಿ ಮತ್ತು ಇತರ ನಾಟಕಗಳು (ನಾಟಕ) ಮುಂತಾದವು. ಕನ್ನಡ ...
READ MORE