‘ಕೈರಳೀ ಕಥೆಗಳು’ ಪುರಾತನ ಕೇರಳ ಅಂದರೆ ಮಾಂತ್ರಿಕರ ತವರೂರು. ಜೊತೆಗೆ ನಿಗೂಢ ಜನಪದ ಕತೆಗಳಿಗೂ ಇಲ್ಲಿ ಕೊರತೆಯಿಲ್ಲ. ಅಂಥ ಅದ್ಭುತ ಜನಪದ ಕಲಾ ಭಂಡಾರ ನಮ್ಮ ನೆರೆರಾಜ್ಯವಾಗಿರುವ ಕೇರಳ (ಅಂದಿನ 'ಮಲಯಾಳ ದೇಶ)ದಲ್ಲಿದೆ. ಪಶ್ಚಿಮ ಘಟ್ಟಗಳು ಹಾಗೂ ಅರೇಬಿಯನ್ ಸಮುದ್ರದ ಮಟ್ಟದಲ್ಲಿ ಮುದುಡಿ ಮಲಗಿರುವ ಈ ಭೂಪ್ರದೇಶ ಯಕ್ಷ-ಯಕ್ಷಿ, ಕಿನ್ನರ-ಕಿನ್ನರಿಯರು, ಐಂದ್ರಜಾಲಿಕ ಪ್ರಯೋಗದ ಪ್ರಸಂಗಗಳು, ಜೊತೆಗೆ ಪಶು, ಪಕ್ಷಿ, ಪ್ರಾಣಿಗಳನ್ನು ತನ್ನ ಕಥಾ ಪರಂಪರೆಯಲ್ಲಿ ಹೊಂದಿದೆ. ಅದರಿಂದ ಆಯ್ದ ಹಲವು ಕತೆಗಳ ಸಂಗ್ರಹವಿದು. ಕೇರಳದ ಮಾಂತ್ರಿಕರು ಎಂದರೆ ಇಂದಿಗೂ ಎದೆ ಝಲ್ಲೆನ್ನುತ್ತದೆ. ಮಂತ್ರ ತಂತ್ರದ ಕತೆಗಳ ಜೊತೆಗೆ ಅನೇಕ ತಮಾಷೆಯ ಕತೆಗಳೂ ಇಲ್ಲಿವೆ. ಮಂತ್ರಕ್ಕೆ ಅಷ್ಟೊಂದು ಶಕ್ತಿ ಇದೆಯೇ? ಗೊತ್ತಿಲ್ಲ, ಆದರೆ ಇಲ್ಲಿಯ ಕಥೆಗಳಿಗಂತೂ ಆಕರ್ಷಕ ಮಾಂತ್ರಿಕ ಶಕ್ತಿಯಿದೆ.ಅಂತಹ ಕಥೆಗಳನ್ನು ಈ ಪುಸ್ತಕದಲ್ಲಿ ಓದಬಹುದಾಗಿದೆ
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE