ಇದೊಂದು ವಿಚಿತ್ರ ಸ್ಥಿತಿ. ನೀವು ಹಲವು ದುಃಖಗಳಲ್ಲಿ ಸಿಲುಕಿದಾಗ ಯಾವ ಕಣ್ಣೀರು ಯಾವ ದುಃಖದ್ದೆಂದು ತಿಆಯುವುದಿಲ್ಲ. ಇನ್ನು ಈ ದುಃಖಗಳಿಂದ ಬಿಡುಗಡೆ ಇಲ್ಲವೆಂದಾದರೆ ಇವು ಬದುಕಿನ ಸೌಂದರ್ಯವನ್ನು ಸೃಷ್ಟಿಸಿಬಿಡುತ್ತವೆ. ಈ ಕಥೆಗಳ ಒಟ್ಟು ಪಾಡು ಹಾಡಾದ ಬಗೆ ಇದು. ಇಲ್ಲಿನ ಬಡ ಪಾತ್ರಗಳು ಅದೆಷ್ಟು ಶ್ರೀಮಂತವಾಗಿವೆ ಎನಿಸುತ್ತದೆ. ತಮಗೆ ಸಿಕ್ಕ ಅಂಕುಡೊಂಕಾದ ಏಕತಾರಿಯಿಂದಲೇ ಅಗೋಚರ ರಾಗಗಳನ್ನು ಹೊಮ್ಮಿಸಿವೆ. ಬದುಕಿನ ವಿಚಿತ್ರ ಒತ್ತಡದಲ್ಲಿ ಸಿಲುಕಿರುವ ಈ ಪಾತ್ರಗಳು ಬದುಕಲು ತೋರುವ ತಾಣವೇ ಇಲ್ಲಿನ ದರ್ಶನ, ಇವುಗಳ ಮುಗ್ಧತೆ ಮತ್ತು ವಿಕ್ಷಿಪ್ತತೆಯೇ ಇಲ್ಲಿನ ಆಸ್ತಿ. ಇವು ಮಾಡುವ ದುಸ್ಥಾಹಸಗಳೇ ಬದುಕಿನ ಭರವಸೆ. ಮುಂದೆ ಸಾಗುತ್ತಾ ಹೋಗುವ ಅದೃಷ್ಟದ ಅಗತ್ಯ ಇವಕ್ಕಿಲ್ಲ. ಅಡ್ಡಡ್ಡ ಹಾಯುತ್ತ ದುರ್ಗಮ ಹಾದಿಗಳಲ್ಲಿ ಪಯಣಿಸಿವೆ. ಇವುಗಆಗು ಕೂಡ ಬದುಕೆಂಬುದು ಒಂದು ನಿರಂತರ ಭರವಸೆ. ಅರೆ! ಹೌದಲ್ಲವೆ, ಕಥೆಗಾರನಿಗೂ ಕಥೆ ಎಂಬುದು ನಿರಂತರ ಭರವಸೆಯೆ, ಈ ದಾರಿಯಲ್ಲಿ ಶಶಿ ತರೀಕೆರೆ ಮೂಡಿಸಿದ ಹೆಜ್ಜೆ ಗುರುತು ಸಾಮಾನ್ಯವಾದುದಲ್ಲ. ಎಲ್ಲೂ ದಣಿಯದ ಅವರ ಕಥನ ಕಲೆ ಕನ್ನಡ ಗದ್ಯದ ಭರವಸೆಯೂ ಹೌದು.
ಯುವ ಬರಹಗಾರ ಶಶಿ ಅವರು ಜನಿಸಿದ್ದು 1990 ಜನವರಿ 7ರಂದು. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶಶಿ ಪ್ರಸ್ತುತ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಟೆಕ್ನೀಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವಿತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಇವರ ‘ಡುಮಿಂಗ’ ಕಥಾ ಸಂಕಲನ 2019 ರ ಸಾಲಿನ ಛಂದ ಪ್ರಶಸ್ತಿ ಒಲಿದು ಬಂದಿದೆ. ಟೊಟೊ ಫಂಡ್ಸ್ ದಿ ಆರ್ಟ್ (ಟಿ.ಎಫ್.ಎ) ಕೊಡಮಾಡುವ 2020ನೇ ಸಾಲಿನ ಟೊಟೊ ಪ್ರಶಸ್ತಿಗೆ ಭಾಜನರಾಗಿದ್ದಾರೆ. ...
READ MORE