‘ಲದೇಣಿಯಾ’ ಕೃಷ್ಣನಾಯಕ ಅವರ ಕಥಾಸಂಕಲನವಾಗಿದೆ. ಕೃಷ್ಣನಾಯಕ್ ಅವರು ಈ ಸಂಕಲನದಲ್ಲಿ ಲಂಬಾಣಿ ಸಮುದಾಯದ ಬದುಕಿನ ಕ್ರಮವನ್ನು ಒಂಬತ್ತು ಕತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. 'ಲದೇಣಿಯಾ' ಅಂದರೆ ದನಗಳ ಮೇಲೆ ಹೇರು ಸಾಗಿಸುವುದು ಎಂದು ಅರ್ಥ. ಅದೇ ಹೆಸರಿನ ಒಂದು ಕತೆ ಇಲ್ಲಿದೆ. ಗೀತಾ ನಾಗಭೂಷಣ, ಮಲ್ಲಿಕಾರ್ಜುನ ಹಿರೇಮಠರ ಕಾದಂಬರಿಗಳಂತೆ ಇಲ್ಲಿನ ಕತೆಗಳು ಲಂಬಾಣಿ ಸಂಸ್ಕೃತಿಯ ಅನನ್ಯತೆಯನ್ನು ಚಿತ್ರಿಸುತ್ತವೆ.
ಪ್ರೊ. ಕೃಷ್ಣ ನಾಯಕ ಸಮಕಾಲೀನ ಪ್ರಮುಖ ಕಥೆಗಾರರಲ್ಲೊಬ್ಬರು. ಲಂಬಾಣಿ ಜನಾಂಗದಿಂದ ಬಂದ ಕೃಷ್ಣ ನಾಯಕರು ಸಹಜವಾಗಿ ತಮ್ಮ ಸಮಾಜದ ದುಃಖ ದುಮ್ಮಾನಗಳಿಗೆ ತಮ್ಮ ಕಥೆಗಳಲ್ಲಿ ಧ್ವನಿ ನೀಡಿದ್ದಾರೆ. ಸಣ್ಣಕಥೆಯು ಕೃಷ್ಣ ನಾಯಕರಿಗೆ ವಿಶೇಷತಃ ಒಗ್ಗಿದ ಸಾಹಿತ್ಯ ಪ್ರಕಾರ. ಅವರು ಕಳೆದ ಎರಡು ದಶಕಗಳಿಂದ ಕಥಾ ಕ್ಷೇತ್ರದಲ್ಲೇ ತಮ್ಮ ಸೃಜನಶೀಲ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಮುನ್ನಡೆದಿದ್ದಾರೆ. ಕೃತಿಗಳು: ಲದೇಣಿಯಾ ...
READ MOREಹೊಸತು- ಸೆಪ್ಟೆಂಬರ್-2005
ಲಂಬಾಣಿ ಸಮುದಾಯ ಕರ್ನಾಟಕ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿಯೂ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಬ೦ದಿದೆ. ಕೃಷ್ಣನಾಯಕ್ ಅವರು ಈ ಸಂಕಲನದಲ್ಲಿ ಲಂಬಾಣಿ ಸಮುದಾಯದ ಬದುಕಿನ ಕ್ರಮವನ್ನು ಒಂಬತ್ತು ಕತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. 'ಲದೇಣಿಯಾ' ಅಂದರೆ ದನಗಳ ಮೇಲೆ ಹೇರು ಸಾಗಿಸುವುದು ಎಂದು ಅರ್ಥ. ಅದೇ ಹೆಸರಿನ ಒಂದು ಕತೆ ಇಲ್ಲಿದೆ. ಗೀತಾ ನಾಗಭೂಷಣ, ಮಲ್ಲಿಕಾರ್ಜುನ ಹಿರೇಮಠರ ಕಾದಂಬರಿಗಳಂತೆ ಇಲ್ಲಿನ ಕತೆಗಳು ಲಂಬಾಣಿ ಸಂಸ್ಕೃತಿಯ ಅನನ್ಯತೆಯನ್ನು ಚಿತ್ರಿಸುತ್ತವೆ. ಆದರೆ ಇಲ್ಲಿನ ಬಹುಪಾಲು ಕತೆಗಳಲ್ಲಿ ಬಂಜಾರ ಸಂಸ್ಕೃತಿಯ ವಿಶಿಷ್ಟತೆಯನ್ನು ಆಡುಮಾತಿನ ಶೈಲಿಯಲ್ಲಿ ಚಿತ್ರಿಸುವ ತವಕ ಮೇಲುಗೈಯಾಗಿದ್ದು ಪಾತ್ರಗಳ ಶೋಧನೆ ಕಡಿಮೆಯಾಗಿದೆ. ಕತೆಗಿರಬೇಕಾದ ಕಲಾತ್ಮಕ ಚೌಕಟ್ಟಿನ ಕೊರತೆ ಕಾಣುತ್ತದೆ.