‘ಹೊತ್ತು ಗೊತ್ತಿಲ್ಲದ ಕಥೆಗಳು’ ಅಬ್ದುಲ್ ರಶೀದ್ ಅವರ ಕತಾ ಸಂಕಲನ. ಮೈಸೂರಿನ ಅನುಗ್ರಹ ಪ್ರಕಾಶನ ಪ್ರಕಟಿಸಿದೆ. ಇಲ್ಲಿ ಕತೆಗಾರ ಅಬ್ದುಲ್ ರಶೀದ್ ಅವರ ಈವರೆಗಿನ ಆಯ್ದ 23 ಕತೆಗಳು ಸಂಕಲನಗೊಂಡಿವೆ. ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಈ ಕೃತಿಯನ್ನು ಬಿಡುಗಡೆ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಹೊತ್ತು ಗೊತ್ತಿಲ್ಲದ ಕಥೆಗಳು ತುಂಬಾ ಅಮೂಲ್ಯವಾದವು, ಅವರು ಬರೆದಿರುವ ಕಥೆಗಳು ಸ್ವಪ್ನದಂತಿರುತ್ತವೆ. ಆದರೆ ಅವರ ಕಣ್ಣಿಗೆ ಕಾಣುವುದು ಕೇವಲ ಕನಸಾಗಿರುವುದಿಲ್ಲ' ಎನ್ನುತ್ತಾರೆ ಕಾಯ್ಕಿಣಿ. 'ಬರವಣಿಗೆ ಕಾವ್ಯಾತ್ಮಕವಾಗಿದೆ, ಹೇಳುವ ಮೂಲಕ ಹೇಳಲಾಗದ್ದನ್ನು ಹೇಳುವುದೇ ಕಾವ್ಯ ಅಬ್ದುಲ್ ರಶೀದ್ ತಾವು ನೇರ ಹೇಳಲಾಗದ್ದನ್ನು ಇಲ್ಲಿನ ಕತೆಗಳ ಮೂಲಕ ಹೇಳಿದ್ದಾರೆ'ಎಂಬುದು ಜಯಂತ ಕಾಯ್ಕಿಣಿ ಅವರ ಅಭಿಪ್ರಾಯ.
ಕೃತಿಯ ಪರಿವಿಡಿಯಲ್ಲಿ ಸಂಪೂರ್ಣ ಪಾರಿಜಾತ, ಈ ಮಳೆಯ ನಂತರ, ಮೂಸಾ ಮೊಯಿಲಿಯಾರರ ಮುದ್ದಿನ ಮಗಳು, ಹಾಲು ಕುಡಿದ ಹುಡುಗಾ, ಪ್ರಾಣಪಕ್ಷಿ, ಒಂದು ಪುರಾತನ ಪ್ರೇಮ, ಮಂಗಗಳಾದ ಮೂವರು ಹುಡುಗರು, ಕಪ್ಪು ಹುಡುಗನ ಹಾಡು, ಪಾತು, ಬೀಜ, ಬರಾತಿನ ರಾತ್ರಿ, ಕಾಮ್ರೇಡ್ ಮತ್ತು ಉಮ್ಮ, ಉಪವಾಸ 23 ಕಥೆಗಳಿವೆ.
'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...
READ MORE