ಕುದರಿ ಮಾಸ್ತರ ಕೃತಿ ಲೇಖಕ ಟಿ.ಎಸ್ ಗೊರವರ ಅವರ ಎರಡನೆಯ ಕಥಾ ಸಂಕಲನ. ಪೂರ್ವಗ್ರಹ ಪೀಡಿತ ಮಾದರಿಯಿಂದ ಮುಕ್ತವಾಗಿರುವುದು, ತಮ್ಮ ಗ್ರಾಮೀಣ ಅನುಭವವನ್ನು ಯಾವುದೇ ಚೌಕಟ್ಟಿಗೂ ಸಿಕ್ಕಿಸದೆ ಅತ್ಯಂತ ಪ್ರಾಮಾಣಿಕವಾಗಿ ತೆರೆದಿಡುವುದು ಒಂಬತ್ತು ಕತೆಗಳಿರುವ ಈ ಸಂಕಲನದ ಕಣ್ಸೆಳೆಯುವ ಬಹುಮುಖ್ಯ ಗುಣವಾಗಿದೆ. ಇಲ್ಲಿನ ಕಥೆಗಳು ಗ್ರಾಮ್ಯ ಜಗತ್ತಿಗೆ ತೆರೆದಿರುವಂತಹವು.
‘ಕುದರಿ ಮಾಸ್ತರ’ ಕಥೆಯಲ್ಲಿ ದೇಸೀಯ ಜೀವನ ಶೈಲಿಯನ್ನು ಮೆಚ್ಚಿಕೊಂಡು ಅಳವಡಿಸಿಕೊಂಡಿದ್ದ ಮಾಸ್ತರ ತಾನು ಇಷ್ಟಪಡದಿದ್ದರೂ ಅನಿವಾರ್ಯವಾಗಿ ಆಧುನೀಕರಣದ ಪ್ರಕ್ರಿಯೆಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಹೊರಸು, ಕುದರೆ ಮತ್ತು ಲೂನಾ ಈ ಮೂರು ರೂಪಕಗಳ ಮೂಲಕ ದೇಸೀಯತೆ ಮತ್ತು ಆಧುನೀಕರಣದ ಮುಖಾಮುಖಿಯ ಚಿತ್ರ ಈ ಕಥಾನಕದಲ್ಲಿ ಮೂಡಿಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ, 1984 ಜೂನ್ 10 ರಂದು ಜನಿಸಿದರು. ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ತನ್ನ ಎದೆಯ ಮೆದುವನ್ನೇ ನಾದಿ ನಾದಿ ಮಿದ್ದು ಒಂದು ಹದದಲ್ಲಿ ಕೆತ್ತಿದಂತಿರುವ ಇವರ ...
READ MORE