ಕತೆಗಾರ್ತಿ ಆರ್. ಶೈಲಜ ಶರ್ಮ ಅವರ ಕತಾಸಂಕಲನ ಯಾರು ಹುಚ್ಚರು... ಪ್ರಸಕ್ತ ಕಥಾಸಂಕಲನದಲ್ಲಿ ಸುಮಾರು ಎಪ್ಪತ್ತಕ್ಕೂ ಮಿಗಿಲಾಗಿ ಪುಟ್ಟ ಲೇಖನಗಳಿದ್ದು, ತಮ್ಮ ಇದೂವರೆಗಿನ ಸಮಾಜದಲ್ಲಿನ ಅನೇಕ ಜನರೊಡನೆ ಒಡನಾಟ, ಸುತ್ತಮುತ್ತಲಿನ ಕಟ್ಟ ಕಡೆಯ ವ್ಯಕ್ತಿಗಳ ಅನುಭವಾಮೃತ, ಚೆನ್ನಾಗಿ ಅಭಿವ್ಯಕ್ತಿಸಿದ್ದು ಓದುಗರನ್ನು ಹಿಡಿದಿಡುತ್ತದೆ. ಧಾವಂತದ ಇತ್ತೀಚಿನ ದಿನಮಾನಗಳಲ್ಲಿ ದೊಡ್ಡ ಕಾದಂಬರಿಗಳನ್ನು ಓದುವುದು ಕೊಂಚ ಕಷ್ಟ ಸಾಧ್ಯವೇ ಸರಿ! ಈ ಕಥಾ ಸಂಕಲನದಲ್ಲಿನ ಪುಟ್ಟ ಲೇಖನಗಳನ್ನು ಅಲ್ಪ ಸ್ವಲ್ಪವೇ ಓದಿದರೂ ಮನನ ಮಾಡಿಕೊಳ್ಳುವಂತಿವೆ. ಭಾಷೆಯ ಮೇಲಿನ ಹಿಡಿತ ಚೆನ್ನಾಗಿದೆ. ವಯಸ್ಸು ಹೆಚ್ಚಿದಷ್ಟೂ ಮುಗ್ಧತೆ ಹೆಚ್ಚುತ್ತದೆ ಎಂಬ ಭಾವವನ್ನು "ಮುಗ್ಧ ಮನಸ್ಸು" ಲೇಖನ ಹೊರಚೆಲ್ಲಿದೆ. " ಕೀ ಎಕ್ಸಚೇಂಜ್ " ನಲ್ಲಿ ಇತ್ತೀಚಿಗೆ ಮಹಾ ನಗರಗಳಲ್ಲಿ ತಲೆ ಎತ್ತಿರುವ ಗಂಡ ಹೆಂಡತಿ ಅದಲು ಬದಲಾಗಿ ಸುಖಿಸುವ ಪರಿಯಾಗಿದೆ. "ಮಲ್ಲಿಗೆ ತೋರಿಸಿದ ಆಟ "ದಲ್ಲಿ ಅಕ್ರಮ ಸಂಬಂಧದ ಅನಾವರಣವಾಗಿದೆ. " ಬಾಳೆ ಹಣ್ ಡಾಕ್ಟರ್" ಹೆಸರು ಹೇಗೆ ಬಂತೆಂಬುದು ಓದಿಯೇ ತಿಳಿಯಬೇಕು... ಅಲ್ಲಲ್ಲಿ ನವಿರು ಹಾಸ್ಯ ಲೇಪಿಸಿ, ಸಮಾಜದ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಬರೆಯುವ ಶೈಲಿ ತುಂಬಾ ಚೆನ್ನಾಗಿದೆ.
ಟಿವಿ ಚಾನಲ್ ನಲ್ಲಿ ನಿರೂಪಣೆ ಮಾಡುವ ಆರ್. ಶೈಲಜ ಶರ್ಮ ಅವರು ಚೈತನ್ಯ ಶಾಲಾ ಶಿಕ್ಷಕಿಯಾಗಿ, ಆಡಳಿತ ಮಂಡಳಿಯ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಚಾರ ಗೋಷ್ಢಿಗಳಲ್ಲಿ, ಹಾಗೂ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ. ಕೃತಿ: ಯಾರು ಹುಚ್ಚರು.. ...
READ MORE