ಕಥೆಗಾರ, ಬರಹಗಾರರಾದ ವಸುಧೇಂದ್ರ ಅವರ ಸಣ್ಣ ಕತೆಗಳ ಸಂಗ್ರಹ ’ಮನೀಷೆ’ 1998 ರಲ್ಲಿ ಮೊದಲ ಮುದ್ರಣ ಕಂಡಿತ್ತು.
ಮಡಿ ಮೈಲಿಗೆಯನ್ನು ಬದುಕಿನ ರೀತಿಯಾಗಿಸಿಕೊಂಡು, ಮೌಢ್ಯಗಳಿಗೆ ತಮ್ಮ ಜೀವನವನ್ನೇ ಬಲಿ ಕೊಟ್ಟು ಅದರ ಪರಿವೆಯೂ ಇಲ್ಲದೆ ಅನಿವಾರ್ಯವಾಗಿ ಬದುಕುವ, ಬದುಕುವಂತೆ ಮಾಡಿದ ಸಮಾಜದ ನಂಬಿಕೆಗಳ ವಿರುದ್ದ ಚಕಾರವೆತ್ತದ ಮಡಿ ಹೆಂಗಸರ ಬದುಕು, ಬವಣೆಗಳೇ ಈ ಕಥಾಸಂಕಲನದ ಕೇಂದ್ರ ಬಿಂದುವಾಗಿದೆ
ಬದುಕಿಗೆ ಆಧಾರವಾಗಿರುವ ಗಂಡನನ್ನು ಕಳೆದುಕೊಂಡು ಮಡಿಹೆಂಗಸಾಗಿ ಬೇರೆಯವರ ಮನೆ ಕೆಲಸ ಮಾಡಿ ಮಗನನ್ನು ಸಾಕುವ ಕಮಲಮ್ಮನ ಬದುಕು ಬವಣೆಯ ಚಿತ್ರಣ ಇಲ್ಲಿದೆ. ಮೈಲಿಗೆಯಿಂದ ಮಡಿಗೆ ಮಗನನ್ನು ಹೇಗಾದರೂ ತರುವ ಅವಳ ಪ್ರಯತ್ನಗಳು ವಿಫಲವಾಗುವ ಮತ್ತು ಅದನ್ನು ವ್ಯಂಗ್ಯದಿಂದಲೇ ನೋಡುವ ಸಮಾಜದ ರೀತಿನೀತಿಗಳ ಬಗ್ಗೆ ಈ ಕತೆ ಸೂಕ್ಷ್ಮಗ್ರಹಿಕೆಗೆ ಓದುಗರನ್ನು ಕೊಂಡುಯ್ಯುತ್ತದೆ.
ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ...
READ MORE