‘ಮೀನ್ ಪಳ್ದಿ’ ಕೃತಿಯು ಆರ್.ವಿ.ಭಂಡಾರಿ ಅವರ ಕತಾಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಪ್ರತಿಭಟನಾ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಆರ್. ವಿ. ಭಂಡಾರಿಯವರ ಹದಿನೇಳು ಕಥೆಗಳ ಸಂಕಲನ `ಮೀನ್ ಪಳ್ದಿ‘. ಜಾತಿ ಸಂಘರ್ಷಗಳು, ಹಸಿವೆ, ಅವನ್ನು ಮೀರಲು ಹವಣಿಸುವ ಆದರ್ಶ, ಬದಲಾವಣೆಗಳು ಹಾಕುವ ಬೇಲಿ ಮೊದಲಾದವನ್ನು ಅವರ ಕಥೆಗಳು ಒಳಗೊಳ್ಳುತ್ತಾ ಹೋಗುತ್ತವೆ. `ಇತಿಹಾಸವೂ ಮಾತಾಡುವುದಿಲ್ಲ‘ ಹಿಂದು-ಮುಸ್ಲಿಂ ಸಾಮರಸ್ಯ ಕುರಿತ ಜಿಜ್ಞಾಸೆಯನ್ನು ವಸ್ತುವಾಗಿಸಿಕೊಂಡ ವಿಭಿನ್ನ ಮಾದರಿಯ ಕಥೆ. `ಅಂಗಡಿ ಪೂಜೆ‘, `ಮೀನ ಪಳ್ದಿ‘ ಕಥೆಗಳು ಹಸಿವೆಯ ವಿವಿಧ ಮುಖಗಳನ್ನು ಬಿಚ್ಚಿಡುತ್ತವೆ. ಕಥನ ನಿರೂಪಣೆಯ ಸೂಕ್ಷ್ಮ ಧಾಟಿಯಲ್ಲೇ ಭಂಡಾರಿ ರೂಪಕಗಳನ್ನು ಕಟ್ಟುತ್ತಾರೆ. ಕೆಲವೊಮ್ಮೆ ಇಡೀ ಕಥೆಯ ಆಯ್ಕೆಯೇ ರೂಪಕವಾಗಿ ಪರಿಣಮಿಸುವುದುಂಟು. ಸಂಭಾಷಣೆ ಆಧಾರಿತ ನಿರೂಪಣೆ ಅವರ ಆಯ್ಕೆಯಾಗಿದೆ. ಏನನ್ನೋ ಚಿಮ್ಮಿಸಿ, ಉತ್ಸಾಹ ತುಂಬಿ ಕೆಲವು ಕಥೆಗಳು ದಿಢೀರನೆ ಅಂತ್ಯವಾಗಿ ಬಿಡುತ್ತವೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...
READ MORE