ಸುನಂದಾ ಕಡಮೆ ಅವರ ಎರಡನೆ ಕತಾ ಸಂಕಲನ ‘ಗಾಂಧಿ ಚಿತ್ರದ ನೋಟು. ವಾಟ್ಸಾಪ್ ಯುಗ ಆರಂಭವಾಗುವ ಮುಂಚಿನ ಕಾಲದ ಇಲ್ಲಿಯ ಕಥೆಗಳಲ್ಲಿ ಸಂಬಂಧಗಳ ನಡುವಿನ ತಾಕಲಾಟಗಳೇ ಪ್ರಧಾನವಾಗಿವೆ.
ಸಮಕಾಲೀನ ಕುಟುಂಬ ಸದಸ್ಯರಲ್ಲಿ ಭಾವನೆಗಳು ಬೇರಿದ್ದು, ಒಂದೆಡೆ ಜೀವಿಸಬೇಕಿರುವಾಗ ಏಳುವ ಮನಸ್ತಾಪದ ಅಲೆಗಳು, ಅವುಗಳನ್ನು ನಿಭಾಯಿಸಲು ಬೇಕಿರುವ ತ್ಯಾಗ ಮನೋತೊಳಲಾಟಗಳು ಇಲ್ಲಿ ಚಿತ್ರಿತವಾಗಿವೆ. ಇದು ಎಲ್ಲರ ಬದುಕಿನಲ್ಲೂ ಹಾಸುಹೊಕ್ಕಾಗುವ ಮನಸ್ತಾಪದ ಚೌಕಟ್ಟಿನಾಚೆ ಯೋಚಿಸುವಂತಹ ಕತೆಗಳು. 2008ರಲ್ಲಿ ಹೆಗ್ಗೋಡಿನ ಅಕ್ಷರ ಪ್ರಕಾಶನ ಈ ಪುಸ್ತಕ ಪ್ರಕಟಿಸಿತ್ತು. ಇದೀಗ ಅಹರ್ನಿಶಿ ಪ್ರಕಾಶನ ಮರುಮುದ್ರಣ ಮಾಡಿದೆ.
ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...
READ MOREಸಮಾಜವು ವ್ಯಕ್ತಿಯ ಮನೋಭಾವದಮೇಲೆ ಹೇಗೆ ಪ್ರಭಾವ ಬೀರಿದೆ, ವ್ಯಕ್ತಿಯ ನಡವಳಿಕೆ, ಸಾಂಪ್ರದಾಯಿಕ ಆಚಾರ ವಿಚಾರಗಳು ಹೇಗೆ ಅವಿಭಾಜ್ಯ ಅಂಗವಾಗಿವೆ ಎನ್ನುವುದನ್ನು ಸುನಂದಾ ಕಡಮೆ “ಗಾಂಧಿ ಚಿತ್ರದ ನೋಟು ಕಥಾಸಂಕಲನದಲ್ಲಿ ತೆರೆದಿಟ್ಟಿದ್ದಾರೆ. ಮನುಷ್ಯ ಸಂಬಂಧಗಳ ನಡುವೆ ಉಂಟಾಗುವ ಬಿರುಕನ್ನು, ಸತ್ತವರ ಬಗೆಗಿನ ನಿಲುವುಗಳನ್ನು “ಪತ್ತೊಡೆ' ಕಥೆ ತೆರೆದಿಟ್ಟರೆ, ತಂದೆ-ಗಂಡಮಗ ಈ ಸಂಬಂಧಗಳು, ಕುಟುಂಬದಲ್ಲಿನ ಮತ್ತು ಸಮಾಜದಲ್ಲಿನ ಸ್ಥಾನಮಾನ, ಜವಾಬ್ದಾರಿಗಳನ್ನು “ಚಿನ್ನಿದಾಂಡು' ಅನಾವರಣಗೊಳಿಸಿದೆ. ಈ ಸಂಕಲನದಲ್ಲಿರುವ ಹದಿಮೂರು ಕಥೆಗಳು ಒಂದಿಲ್ಲೊಂದು ರೀತಿಯಲ್ಲಿ ಗಮನ ಸೆಳೆಯುತ್ತವೆ. ಓದುಗ ಸೂಕ್ಷ್ಮವಾಗಿ ಪಾತ್ರದ ಒಳಹೊಕ್ಕಾಗ ಅವನ ಬದುಕೂ ಕಥೆಯಲ್ಲಿ ಮಿಳಿತಗೊಂಡಿರುವಂತೆ ವೇದ್ಯವಾಗುತ್ತದೆ.
ಕೃಪೆ : ಪ್ರಜಾವಾಣಿ (2020 ಮಾರ್ಚಿ 22)