ಲೇಖಕ ಹಾಗೂ ನಗೆಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ಇದು ಕಥಾಕಾಲ ಭಾಗ-4. ಸಂತ ಶ್ರೀ ಅಚ್ಯುತ್ ದಾಸ ಹಾಗೂ ಮತ್ತಿತರರಿಂದ ಕೇಳಿ ತಿಳಿದ ಮೆಚ್ಚಿದ ದೃಷ್ಟಾಂತಗಳ ಕಥೆಗಳಿಂದ ಪ್ರಭಾವಿತರಾಗಿ ಈ ಕೃತಿ ರಚನೆಗೆ ಸಾಧ್ಯವಾಯಿತು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಹಾಸ್ಯ ಸಾಹಿತಿ ಬೀchi ಅವರ ಸಾಹಿತ್ಯ ಓದಿಯೂ ತಮ್ಮ ಅನುಭವದ ಜ್ಞಾನವನ್ನು ನಗೆ ಹನಿಗಳಾಗಿ ಪರಿವರ್ತಿಸಿ ಜನರಿಗೆ ಮನರಂಜನೆ ನೀಡುವತ್ತ ಗಮನ ಕೇಂದ್ರೀಕರಿಸಿದ ಲೇಖಕರು, ಈ ಕೃತಿಯಲ್ಲೂ ಹಾಸ್ಯ ಮಿಶ್ರಿತ ಕಥೆಗಳನ್ನು ಸಂಕಲಿಸಿದ್ದಾರೆ.
ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು. ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...
READ MORE