ಗವಿಸ್ವಾಮಿ ಎನ್ ಅವರ ಅತಿ ಸಣ್ಣ ಕತೆಗಳ ಸಂಕಲನ ತ್ಯಾಗಕ್ಕಿಲ್ಲ ನೂಕುನುಗ್ಗಲು. ಇಲ್ಲಿನ ಕಥೆಗಳಲ್ಲಿನ ಮಾನವೀಯತೆಯ ನೆಲೆ ಎದ್ದು ಕಾಣುವಂತಿದೆ. ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಲೇಖಕರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ವೀರಕಪುತ್ರ ಶ್ರೀನಿವಾಸ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ಲೇಖಕ ಡಾ. ಗವಿಸ್ವಾಮಿ ಎನ್. ಅವರು ವೃತ್ತಿಯಲ್ಲಿ ಪಶುವೈದ್ಯರಾಗಿದ್ದಾರೆ. ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಪಶುಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಾಸಿ ಬರಹಗಾರನಾಗಿರುವ ಅವರ ಚೊಚ್ಚಲ ಕೃತಿ "ಚಕ್ರ" ಎಂಬ ಅತಿ ಸಣ್ಣಕಥೆಗಳ ಸಂಕಲನ ಕನ್ನಡ ಸಾಹಿತ್ಯಾಸಕ್ತರ ಗಮನ ಸೆಳೆದು ಎರಡನೇ ಮುದ್ರಣ ಕಂಡಿದೆ. ಗವಿಸ್ವಾಮಿ ಅವರ ಎರಡನೇ ಕೃತಿ "ಪ್ರಾಣಿಗಳೇ ಗುಣದಲಿ ಮೇಲು!" ಅನುಭವ ಕಥನ ಪಶುಪಕ್ಷಿ ಪ್ರಕಾಶನದಿಂದ ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಹೂವಿನಹಡಗಲಿಯ ಟಿ.ಎಂ.ಆರ್ ಪಬ್ಲಿಕೇಷನ್ಸ್ ವತಿಯಿಂದ ಕೊಡಲಾಗುವ ಸುಲೋಚನ ಸಾಹಿತ್ಯ ಪ್ರಶಸ್ತಿ, ಹಾಗೂ ತುಮಕೂರಿನ ಗುರುಕುಲ ಪ್ರತಿಷ್ಠಾನದಿಂದ ಗುರುಕುಲ ...
READ MORE