‘ನೀನು ಒಂಟಿಯಲ್ಲ’ ಲೇಖಕ, ಮನೋವೈದ್ಯ ವಿರೂಪಾಕ್ಷ ದೇವರಮನೆ ಅವರ ಕಥಾಸಂಕಲನ. ಮದ್ಯ ಸೇವನೆಯಿಂದ ಮಕ್ಕಳ ಮೇಲಾಗುವ ಪ್ರಭಾವಗಳನ್ನು ಮನಮುಟ್ಟುವಂಚೆ ಚರ್ಚಿಸಿದ್ದಾರೆ. ಅವರ ಬಳಿ ಬರುವ ರೋಗಿಗಳ ಮೂಲಕ ಕಂಡುಕೊಂಡ ಸಂಗತಿಗಳನ್ನು ಇಲ್ಲಿ ಕಥೆಯಾಗಿಸಿದ್ದಾರೆ.
ಮಕ್ಕಳ ಮೇಲಾಗುವ ಆತಂಕ, ಭಾವನೆಗಳು, ಹೇಗೋ ಏನೋ ಎಂಬ ಭವಿಷ್ಯದ ಬಗ್ಗೆ ಇರುವ ಭಯವನ್ನೂ, ಪರಿಹಾರಗಳನ್ನೂ ವಿವರಿಸಿದ್ದಾರೆ. ಮದ್ಯವ್ಯಸನಿಯಾದ ತಂದೆಯ ಮೇಲಿನ ಕೋಪ ಉಕ್ಕುತ್ತಿರುವ ಸನ್ನಿ, ಅರ್ಧಕ್ಕೆ ಓದು ನಿಲ್ಲಿಸಿದ ಅಭಯ್, ನಿರ್ಮಲಾಳ ಅಸಹಾಯಕತೆಯಂತಹ ಘಟನೆಗಳನ್ನು ಕಥಾ ಸ್ವರೂಪದಲ್ಲಿ ಮನಮುಟ್ಟುವಂತೆ ಸಂಪೂರ್ಣವಾಗಿ ವಿವರಿಸಿದ್ದಾರೆ.
ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...
READ MORE