ಲೇಖಕ ಸಂತೋಷ್ ರಾವ್ ಪೆರ್ಮುಡ ಅವರ ಸಣ್ಣ ಕತೆಗಳ ಸಂಗ್ರಹ ರೆಕ್ಕೆ ಇದ್ದರೆ ಸಾಕೇ..?. ಇದು ವ್ಯಕ್ತಿತ್ವದ ಪಾಠ ಹೇಳುವ ಕತೆಗಳಾಗಿವೆ. ಖ್ಯಾತ ಬರಹಗಾರ ಹಾಗೂ ಸಿನಿ ಪತ್ರಕರ್ತರು ಶರಣು ಹುಲ್ಲೂರು ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಆರೋಗ್ಯವಂತ ಸಮಾಜ ಕಟ್ಟುವ, ಗುಣವಂತ ಮನಸ್ಸು ಹೆಣೆಯುವ ಬರಹಗಳು ಯಾವುದೇ ರೂಪದಲ್ಲಿ ಬಂದರೂ ಅದನ್ನು ಅಕ್ಷರ ಲೋಕಕ್ಕೆ ಸ್ವಾಗತಿಸುವವನು ನಾನು. ಯವಲೋಕ ಬದಲಾದರೆ, ಯಾವ ಲೋಕ ಬೇಕಾದರೂ ಉದ್ದಾರ ಆಗಬಲ್ಲದು. ತಮ್ಮ ಬರಹಗಳ ಮೂಲಕ ಅಂತಹ ಲೋಕ ತಿದ್ದುವ ಕೆಲಸಕ್ಕೆ ಈ ಮೂಲಕ ಹೊರಟಿದ್ದಾರೆ ಸಂತೋಷ್ ಕುಮಾರ್ ಪೆರ್ಮುಡ ಅವರು ಎಂಬುದಾಗಿ ಹೇಳಿದ್ದಾರೆ.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...
READ MORE