‘ಹೆಬ್ಬಂಡೆ ಮೇಲೆ ಹೆಜ್ಜೆ’ ಕೃತಿಯು ಗೋಪಣ್ಣ ಯಾದವ ಅವರ ಕತಾಸಂಕಲನವಾಗಿದೆ. ಇಲ್ಲಿ ಬೇರೆ ಬೇರೆ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತಹ ಎಂಟು ಕತೆಗಳಿವೆ. ಹಳ್ಳಿಗಳಲ್ಲಿ ನಡೆಯುವ ರಾಜಕೀಯ, ಸಾಮಾಜಿಕ ಅಂತರಗಳು, ಶ್ರೇಣಿಕೃತ ವ್ಯವಸ್ಥೆ, ಬಡವರ ಕೂಗು, ಪ್ರೇಮ, ಕಾಮ, ಮಹಾತ್ಮ ಗಾಂಧಿಯ ಸ್ವರಾಜ್ಯ ಕಲ್ಪನೆಗಳನ್ನೂ, ಮೌಲ್ಯಗಳನ್ನೂ ಇಲ್ಲಿ ಮರುವ್ಯಾಖ್ಯಾನಿಸಲಾಗಿದೆ. ಸ್ತ್ರೀಯರ ಶೋಷಣೆ, ವರದಕ್ಷಿಣೆ ಎಂಬ ಪೆಡಂಭೂತ ಅಲ್ಲದೇ ಇಲ್ಲಿನ ಕತೆಗಳಲ್ಲಿ ಹಳ್ಳಿಯೇ ಪ್ರಪಂಚವಾಗಿ ಅನಾವರಣಗೊಂಡಿದೆ. ಕೆಲವೊಂದು ಸತ್ಯ ಘಟನೆಗಳಾಧಾರಿತ ಜೀವನಗಳು ಇಲ್ಲಿ ಕಥೆಯ ರೂಪ ಪಡೆದುಕೊಂಡಿದೆ. ಲೋಕದ ಅನೇಕ ಸಣ್ಣತನಗಳು, ದೊಡ್ಡತನಗಳು, ರಾಜಕೀಯ ಕ್ಷುಲ್ಲಕಗಳು, ಇಲ್ಲಿ ದಾಖಲುಗೊಂಡಿವೆ.
ಕತೆಗಾರ ಗೋಪಣ್ಣ ಯಾದವ ಅವರು ಮೂಲತಃ ಸುರಪುರ ತಾಲ್ಲೂಕಿನ ಅಮ್ಮಾಪುರದವರು. ಬರವಣಿಗೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಅವರ ಮೊದಲ ಸಂಕಲನ ಹೆಬ್ಬಂಡೆ ಮೇಲೆ ಹೆಜ್ಜೆ. ಕೃತಿಗಳು: ಹೆಬ್ಬಂಡೆ ಮೇಲೆ ಹೆಜ್ಜೆ ...
READ MORE