ಲೇಖಕ ಚಂದ್ರಪ್ರಭ ಕಠಾರಿ ಅವರ ಕಥಾ ಸಂಕಲನ-ಕಾಗೆಮೋಕ್ಷ. ವಿಮರ್ಶಕ ಡಾ. ನಟರಾಜ ತಲಘಟ್ಟಪುರ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಎಲ್ಲ ಕಥೆಗಳು ಯಾವುದೇ ‘ಇಸಂ’ಗೆ ಒಳಗಾಗದೇ, ಯಾವುದೇ ಸಾಹಿತ್ಯ ಚಳವಳಿಗೆ ಒಳಗಾಗದಷ್ಟರ ಮಟ್ಟಿಗೆ ವಿಭಿನ್ನವಾಗಿವೆ. ತಾಜಾತನದಿಂದ ಕೂಡಿವೆ. ಬೆಂಗಳೂರಿನಲ್ಲಿ ಘಟಿಸಿರುವ ಘಟನೆ, ಸಂದರ್ಭಗಳನ್ನು ಕೇಂದ್ರೀವಾಗಿಸಿಕೊಂಡು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕವರ, ಅಮಾಯಕರ, ಅಸಹಾಯಕರ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದವರ, ದುರ್ಬಲ ವ್ಯಕ್ತಿತ್ವದವರ, ಮುಗ್ಧರ ಬದುಕನ್ನು ಕಲಾತ್ಮಕತೆಯಲ್ಲಿ ಹೆಣೆದ ಕಥೆಗಳಾಗಿ, ಓದುಗನೊಟ್ಟಿಗೆ ನೇರವಾಗಿ ಸಂವಾದಿಸುವಂತೆ ಪ್ರೇರೇಪಿಸುತ್ತವೆ. ಮಾನವೀಯ ಸಂಬಂಧಗಳ ಹುಡುಕಾಟದ ಎಲ್ಲ ಕಥೆಗಳಲ್ಲೂ ಕಂಡು ಬರುತ್ತದೆ. ರೋಚಕತೆಗಿಂತ ಇವು ಸಂಯಮದ ಬರಹಗಳಾಗಿವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಚಂದ್ರಪ್ರಭ ಕಠಾರಿ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಕತೆ, ಕವನ, ನಾಟಕ ಬರೆಯುವುದು ಹವ್ಯಾಸ. ಕಠಾರಿ ಕತೆಗಳು ( ಇಲ್ಲಿಯ ಹಲವು ಕತೆಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ, ಈ ಭಾನುವಾರ, ಕರ್ನಾಟಕ ಸಂಘ, ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚು, ಕಥಾ ಸರ್ಧೆಗಳಲ್ಲಿ ಬಹುಮಾನ ಪಡೆದಿವೆ.) ಮತ್ತು ಅಂಬು ( ನಾಟಕ) ಪ್ರಕಟವಾಗಿವೆ. ...
READ MORE