ಲೇಖಕ ಎ.ಎನ್. ಪ್ರಸನ್ನ ಅವರ ಕಥಾ ಸಂಕಲನ-ರಥಸಪ್ತಮಿ. ಈ ಕೃತಿಯು ಬಿ.ಎಚ್. ಶ್ರೀಧರ ಪ್ರಶಸ್ತಿ ಪಡೆದಿದೆ. ವ್ಯಕ್ತಿಗತ ಜೀವನವನ್ನು ಹೇಗೆ ನಿರ್ಮಿಸಿಕೊಳ್ಳಬೇಕು. ಎಷ್ಟು ಹೊಣೆಗಾರಿಕೆ ಇರುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಮನುಷ್ಯು ತನ್ನ ಮನುಷ್ಯತ್ವವನ್ನೇ ಮರೆಯುತ್ತಿದ್ದಾನೆ., ರಾಜಕೀಯ ಪ್ರೇರಣೆಗಳಿಂದ ಹೇಗೆ ಸಾರ್ವಜನಿಕ ಬದುಕು ನಲುಗುತ್ತಿದೆ ಇಂತ್ಯಾದಿ ವಿಷಯ ವಸ್ತುಗಳಿರುವ ಕಥೆಗಳಿರುವ ಸಂಕಲನವಿದು. ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ ಕೆ. ಸತ್ಯ ನಾರಾಯಣ ‘ಕಥೆಗೆ ಅಗತ್ಯಕ್ಕೆ ತಕ್ಕಂತೆ ಶರೀರ ಕೊಡಬಲ್ಲ, ನಿರೂಪಿಸಬಲ್ಲ ಶಕ್ತಿ ಲೇಖಕರಿಗಿದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ರಾಘವೇಂದ್ರ ಪಾಟೀಲ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಎ.ಎನ್. ಪ್ರಸನ್ನ ಅವರು ಕನ್ನಡದ ನವ್ಯೋತ್ತರದ ಒಬ್ಬ ಪ್ರಮುಖ ಕಥೆಗಾರರು’ ಎಂದು ಶ್ಲಾಘಿಸಿದ್ದಾರೆ.
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE