ಲೇಖಕ ಎಂ ಎಸ್ ಶ್ರೀರಾಮ್ ಅವರು ಬರೆದ ಸಣ್ಣ ಕಥೆಗಳ ಸಂಗ್ರಹ, ʼಎಂ ಎಸ್ ಶ್ರೀರಾಮ್ ಕಥಾಗುಚ್ಛʼ. ಅವರ ಕಥಾ ಸಂಕಲನಗಳಿಂದ ಆಯ್ದ ೧೪ ಕಥೆಗಳು 'ಈ ಪುಸ್ತಕ'ದಲ್ಲಿ ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ. ಪುಸ್ತಕದ ಬಗ್ಗೆ ಖ್ಯಾತ ಲೇಖಕ ಯು. ಆರ್. ಅನಂತಮೂರ್ತಿ, “ಶ್ರೀರಾಮ್ ಅವರ ಒಟ್ಟು ಶೈಲಿ ನಾಗರಿಕವಾದ ಶೈಲಿ. ನಾಗರಿಕವಾದ ವರ್ತವೆಯಲ್ಲಿ ಭಾವದ ಪ್ರದರ್ಶನವಿರುವುದಿಲ್ಲ, ಸೋಗು ಇರುವುದಿಲ್ಲ, ತೀವ್ರತೆಯೂ ಇರುವುದಿಲ್ಲ. ಆದರೆ ನಿರುದ್ವೇಗಗೊಳ್ಳದಂತೆ ತಣ್ಣಗೆ ಸಹಾನುಭೂತಿಯಲ್ಲಿ ಮನುಷ್ಯನ ಅತಿರೇಕಗಳನ್ನೂ, ವಕ್ರತೆಗಳನ್ನೂ ಗಮನಿಸುವ ಶಕ್ತಿಯಿರುತ್ತದೆ. ಶ್ರೀರಾಮ್ ಕಥನಕ್ರಮ ಇಂಥ ಸಜ್ಜನಿಕೆಯಿಂದ - ಸೋಗಿಲ್ಲದ ಸಜ್ಜನಿಕೆಯಿಂದ - ಪ್ರೇರಿತವಾಗಿದೆ ಎಂದಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...
READ MORE