ಸಾಫ್ಪ್ ವೇರ್ ಜಗತ್ತಿನಿಂದ ಬಂದ ಕತೆಗಾರರ ಕತೆಗಳು ಕುತೂಹಲದ ಬುತ್ತಿಗಳು. ಅಂತಹ ಹೊಸ ತಲೆಮಾರಿನ ಕತೆಗಾರರಲ್ಲಿ ವಿಕ್ರಂ ಹತ್ವಾರ್ ಕೂಡ ಒಬ್ಬರು. ಶೀರ್ಷಿಕೆಯೇ ಹೇಳುವಂತೆ ಅವರ ’ಝೀರೊ ಮತ್ತು ಒಂದು’ ಸಾಫ್ಟ್‌ವೇರ್ ಪ್ರಪಂಚವನ್ನು ಧ್ಯಾನಿಸುತ್ತದೆ.
ಶೀರ್ಷಿಕೆ ಕತೆಯನ್ನೇ ಗಮನಿಸಿ: 'ಒಂದು ಕವಿತೆಯನ್ನು ಆಸ್ವಾದಿಸುವ ಹಿತದಲ್ಲೇ ಆ ಪ್ರೊಸೆಸ್ಸಿನ ಆಂತರ್ಯವನ್ನು ಆಸ್ವಾದಿಸತೊಡಗಿದ. ಕಣ್ಣಿಗೆ ಕಾಣುವ ಕೋಡಿಂಗ್ ಭಾಷೆಯ ಹಿಂದೆ ಬಾಬ್ ಕಿತ್ಸೆಯ ಆಲೋಚನಾ ಕ್ರಮ, ತಂತ್ರ, ಹಾದಿ, ಉದ್ದೇಶ, ಎಲ್ಲವೂ ನಿಚ್ಚಳವಾಗುತ್ತ ಹೋಯಿತು. ಭಗವಾನ್ ನೋಡಿಯೇ ಇರದ ಮನುಷ್ಯನೊಬ್ಬ ಅವನ ಮುಂದೆ ಝೀರೋ ಮತ್ತು ಒಂದರ ಸರಣಿಯಲ್ಲಿ ಬೆತ್ತಲಾಗುತ್ತ ಹೋದ...’
ಇಂತಹ ಮತ್ತಷ್ಟು ಶಕ್ತಿಶಾಲಿ ಕತೆಗಳನ್ನು ಆಸ್ವಾದಿಸಬೇಕಾದರೆ ವಿಕ್ರಂ ರೀತಿಯ ಹೊಸ ತಲೆಮಾರಿನ ಕತೆಗಾರರನ್ನು ಗಾಢವಾಗಿ ಓದಿಕೊಳ್ಳಲೇಬೇಕು.
ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ಪಡೆದವರು. ಕುಂದಾಪುರ ಮೂಲದವರಾದ ವಿಕ್ರಮ್, ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಜೀರೋ ಮತ್ತು ಒಂದು, ಅಕ್ಷೀ ಎಂದಿತು ವೃಕ್ಷ, ನೀ ಮಾಯೆಯೋಳಗೋ ಹಾಗೂ ಹಮಾರಾ ಬಾಜಾಜ್ ಎಂಬ ಕೃತಿಗಳನ್ನು ರಚಿಸಿದ್ದಾರೆ. ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ-ಯುವ ಪುರಸ್ಕಾರ (2016)