ಕೃತಿ-ಪದ್ಮಪಾಣಿ; ಒಟ್ಟು ಎಂಟು ಕತೆಗಳುಳ್ಳ ಈ ಕತಾ ಸಂಕಲನದಲ್ಲಿ ಚರಿತ್ರೆಯ ಹಿಂದಿರುವ ಕಟು ಸತ್ಯಗಳನ್ನು ಬಿಚ್ಚಿಡುತ್ತಾ ಇತಿಹಾಸದ ಮೂಲಕ ಈ ಕತೆಯ ಸನ್ನಿವೇಶಗಳನ್ನು ರೋಮಾಂಚನಕಾರಿಯಾಗಿಯೂ ಕಟ್ಟುತ್ತಾರೆ ಲೇಖಕ ಕೆ.ಎನ್. ಗಣೇಶಯ್ಯ. ಅಜಂತಾದ ಗುಹೆಗಳಲ್ಲಿಯ ವೈಶಿಷ್ಟ್ಯವನ್ನು ‘ಪದ್ಮಪಾಣಿ’, ಪಾಲುಕ್ಕಮ್ಮ ದೇವತೆಯ ಹಿನ್ನೆಲೆಯನ್ನಾಧರಿಸಿ ‘ಕೆರಳಿದ ಕರುಳು’, ಮುರಿದ ಕಂಭದ ಹಿಂದಿರುವ ದುರಂತ ಕಥೆಯ ‘ಧರ್ಮಸ್ಥಂಭ’ - ಹೀಗೆ ಎಲ್ಲ ಕತೆಗಳು ಒಂದಲ್ಲ ಒಂದು ಇತಿಹಾಸಕ್ಕೆ ತಳುಕು ಹಾಕಿಕೊಂಡು ಅಂದಿನ ಕಾಲಘಟ್ಟವನ್ನು ನಮ್ಮ ಮುಂದೆ ತೆರೆದಿಡುವಲ್ಲಿ ಈ ಕತಾ ಸಂಕಲನ ಗೆಲ್ಲುತ್ತದೆ.
ಈ ಕೃತಿಯ ಪರಿವಿಡಿಯಲ್ಲಿ ಪದ್ಮಪಾಣಿ, ಕೆರಳಿದ ಕರುಳು, ಮರಳ ತೆರೆಗಳೊಳಗೆ, ಕಿತ್ತೂರ ನಿರಂಜಿನಿ, ಕಲೆಯ ಬಲೆಯಲ್ಲಿ, ಉಗ್ರಬಂಧ, ಮಲಬಾರ್ -07, ಧರ್ಮಸ್ಥಂಭ ಎಂಬ ಶೀರ್ಷಿಕೆಗಳಿವೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE