ಪಚ್ಛೆ ರೆಸಾರ್ಟ್

Author : ಯು.ಆರ್. ಅನಂತಮೂರ್ತಿ

Pages 64

₹ 50.00




Year of Publication: 2011
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಖ್ಯಾತ ಸಾಹಿತಿ ಡಾ. ಯು.ಆರ್‍. ಅನಂತಮೂರ್ತಿ ಬರೆದಿರುವ ಕೃತಿ ’ಪಚ್ಛೆ ರೆಸಾರ್ಟ್’. ಈ ಕೃತಿಯು ಹಲವು ಕವಿತೆಗಳನ್ನೂ, ಮತ್ತು ಸಣ್ಣ ಕತೆಗಳನ್ನೂ ಒಳಗೊಂಡಿದೆ.

ಈ ಸಂಕಲನದ ಕತೆಗಳು ಇಹದ ಹಂಗಿಗೆ ಸಿಕ್ಕಿಬಿದ್ದೂ ಬಿಡಿಸಿಕೊಳ್ಳುವ ಶೋಧವಾಗಿದೆ. ಮನುಷ್ಯ ಬೌದ್ದಿಕವಾಗಿ ಎಷ್ಟೇ ಎತ್ತರವನ್ನು ಸಾಧಿಸಿದರೂ ಕಳೆದುಹೋಗಲಾರದ ಕೆಲವು ಭಾವನೆಗಳು ಅಡಕವಾಗುವ ಅಂಶಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಹೆಣ್ಣಿನ ಆಂತರಿಕ ಭಾವನೆಗಳಿಗೆ ಹೊಸ ಪರಿಭಾಷೆಯನ್ನು ಕೊಡಬಲ್ಲ ಸೂಕ್ಷ್ಮ ಪರಿಧಿಯನ್ನು ಈ ಕೃತಿ ಒಳಗೊಂಡಿದೆ.

ಸಾವಿನ ಮುಹೂರ್ತ, ಅಮ್ಮ ನೆನೆಯುತ್ತೇನೆ, ಬರ್ಮಿಂಗಂನಲ್ಲಿ ಮೈಸೂರು ಮಲ್ಲಿಗೆ, ಈ ಲೋಕದಲ್ಲಿ ಆಲೋಕ, ರಾಜ ಮತ್ತು ಸಂತ, ಪ್ರೇಮದ ಗುಟ್ಟು, ವಿಷ ವೃಕ್ಷ, ಮೂರ್ಖರು ಎಂಬ ಕವಿತೆಗಳನ್ನು, ಹಾಗೂ ಎತ್ತಣಿಂದೆತ್ತಣ ಸಂಬಂಧ?, ಪೆಚ್ಛೆ ರೆಸಾರ್ಟ್ ಎಂಬ ಕತೆಗಳನ್ನು ಈ ಕೃತಿ ಒಳಗೊಂಡಿದೆ.

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books