‘ಬಡವರ ಮಗಳು ಹೆಣ್ಣಲ್ಲ’ ಬಾನು ಮುಷ್ತಾಕ್ ಅವರ ಕತಾಸಂಕಲನ. ಈ ಕೃತಿಯಲ್ಲಿ ಸಿದ್ಧಾಂತ ಮತ್ತು ಪ್ರಥಮ ರಾತ್ರೆ, ಹೃದಯದ ಹಕೀಕತ್ತು, ಬೇರಿಗೊಂದಿಷ್ಟು ಪ್ರೀತಿ, ಬಡವರ ಮಗಳು ಹೆಣ್ಣಲ್ಲ, ಡೋ-ಡೋ ಹಕ್ಕಿ, ಕಾಡಿನ ಮಧ್ಯೆ ಬೆಳ್ಳಕ್ಕಿ, ಕರಡಿ ಮತ್ತು ಅಂಗಾಲು, ಹಾಗೂ ಸ್ವರ್ಗವೆಂದರೆ ಎಂದರೆ ಎಂಬ ಎಂಟು ಕತೆಗಳು ಸಂಕಲನಗೊಂಡಿವೆ.
ಹಾಸನದಲ್ಲಿ ನೆಲೆಸಿರುವ ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಕ್ರಿಯಾಶೀಲರಾಗಿದ್ದಾರೆ. ಐದು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಕರಿನಾಗರಗಳು’ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. 1954 ಏಪ್ರಿಲ್ 03 ರಂದು ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು. ಅವರು ಬರೆದ 'ಬೆಂಕಿಮಳೆ' ಕತೆ ಹಸೀನ ...
READ MORE