‘ಒಂದು ತಗಡಿನ ಚೂರು’ ಕೃತಿಯು ಅಶೋಕ ಹೆಗಡೆ ಅವರ ಕತಾಸಂಕಲನವಾಗಿದೆ. ಅವರ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಒಂದು ತಗಡಿನ ಚೂರು ಕೃತಿಯ ದೂರ ಸಮುದ್ರದ ಕಾಡು ಕತೆಯ ಉಮಾಪತಿ, ವೆಂಕಟಸುಬ್ಬಯ್ಯ ರಾಮೋಜಿ ಬಾಳಾ, ಪಿ.ಎಚ್.ಡಿ. ಮತ್ತು ಗಡಿಯಾರ ಗೋಪುರದ ಇತಿಹಾಸವು ಕತೆಯ ವೆಂಕಟಸುಬ್ಬಯ್ಯ ಮುಂತಾದ ಪಾತ್ರಗಳನ್ನು ಇಲ್ಲಿ ನೆನೆಯಬಹುದು. ಇವರುಗಳು ಅನುಸರಿಸುವ ಲಘು ವೈನೋದಿಕ ಧಾಟಿಯನ್ನು ಎಸ್.ದಿವಾಕರ್ ಪೂರ್ತಿಯಾಗಿ ಅನುಸರಿಸುವುದಿಲ್ಲವಾದರೂ ದಿವಾಕರರ ಕತೆಯ ನಿರೂಪಣೆ ಕೂಡ ವಿನೋದದ ಒಂದು ಎಳೆಯನ್ನು ಇರಿಸಿಕೊಂಡೇ ಸಾಗುತ್ತದೆ ಎಂಬುದು ಗಮನಾರ್ಹ ಕೊನೆಯ ಎರಡು ಕತೆಗಳ ನಿರೂಪಕಿಯರಾದ ವಾರಿಜಾ ಮತ್ತು ವೈದೇಹಿಯರು ಕೂಡಾ ತಮ್ಮ ನಿರೂಪಣೆಯಲ್ಲಿನ ನವಿರು ಧಾಟಿಯಿಂದಲೇ ಇದನ್ನು ಸಾಧಿಸುತ್ತಾರೆ ಎಂಬುದು ನಿಜ. ಬಿಳಿಯ ಹೂಗಳ ಕವಿತೆ ಕತೆ ಕೊಂಚ ಭಿನ್ನ ಧಾಟಿಯದು. ಇಲ್ಲಿನ ಪ್ರಧಾನ ಪಾತ್ರಗಳು ಮೂರು ದಂಪತಿಗಳದ್ದು, ಅವರು ರಾಮಚಂದ್ರ ಮತ್ತು ಮಾಲಿನಿ, ತಿರುವೇಂಗಡಂ ಮತ್ತು ಸುಬ್ಬುಲಕ್ಷ್ಮಿ ಹಾಗೂ ಗೇಬ್ರಿಯಲ್ ಮತ್ತು ರೋಸಿ, ಇವರಲದ ಜಗದಾಂಬಾಳ್ ಎನ್ನುವ ಒಂದು ಪಾತ್ರವೂ ಇದ ಸಹಜವಾಗಿಯೇ ಇಲ್ಲಿ ಒಂದು ಬಗೆಯ ಸ್ಪರ್ಧೆ ಹೋಲಿಕೆ ಮತ್ತು ಅನುಸಂಧಾನಗಳಿಂದಾಗಿ ಹುಟ್ಟಿಕೊಳ್ಳುವ ಅನುಮಾನ-ಅಸೂಯೆ ಮತ್ತು ದ್ವೇಷ ಕೂಡ ಪಾತ್ರಗಳಾಗಿ ಮೂಡಿಕೊಳ್ಳುತ್ತವೆ.
ಕವಿ ಕಾದಂಬರಿಕಾರ ಅಶೋಕ ಹೆಗಡೆ 22 ಜುಲೈ 1967 ರಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಂಜಗೋಡ ಎಂಬಲ್ಲಿ ಜನಿಸಿದರು. ಬದುಕಿನ ಬೆರಗುಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದನ್ನು ಕವಿತೆ, ಕಥೆ, ಕಾದಂಬರಿಗಳ ಮೂಲಕ ಮರುಶೋಧಿಸುವ ಕಥೆಗಾರ ಅಶೋಕ ಹೆಗಡೆ. ವೃತ್ತಿರಂಗದ ವಿಶಾಲ ಅನುಭವ – ಲೋಕಗ್ರಹಿಕೆ ಅವರ ಕಥೆಗಳಿಗೆ ವಿಭಿನ್ನ ಮೆರುಗು ನೀಡುತ್ತವೆ. ಪ್ರಕಟಿತ ಕೃತಿಗಳು: ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಶಬ್ದ ಬಣ್ಣ ಇತ್ಯಾದಿ (ಕಥಾಸಂಕಲನಗಳು), ಅಶ್ವಮೇಧ (ಕಾದಂಬರಿ), ಕುರುಡುಕಾಂಚಾಣ (ಅಂಕಣ ಬರಹಗಳು), ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು ...
READ MORE