ಸ.ಜಗನ್ನಾಥ ಅವರ ಸಣ್ಣ ಕಥೆಗಳ ಸಂಗ್ರಹ ‘ಸ.ಜಗನ್ನಾಥ ಅವರ ಸಣ್ಣ ಕಥೆಗಳು’. 1999ರಲ್ಲಿ ಪ್ರಿಯಾ ಪ್ರಕಾಶನದಿಮದ ಬಿಡುಗಡೆಗೊಂಡ ಈ ಕೃತಿಯು ಅನೇಕ ಸಣ್ಣ ಕಥೆಗಳನ್ನು ಒಳಗೊಂಡಿದೆ.
ಲೇಖಕ-ಕವಿ ಸ.ಜಗನ್ನಾಥ ಅವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬಿ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ವಿಷಯದಲ್ಲಿ ಎಂ.ಎ. ಪದವೀಧರರು. ರಾಮನಗರ ಉಪವಿಭಾಗದಲ್ಲಿ ಕರ್ನಾಟಕ ವಿದ್ಯುಚಕ್ತಿ ಮಂಡಳಿಯಲ್ಲಿ ಬೆರಳಚ್ಚುಗಾರರಾಗಿ, ನಂತರ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ (ಕಾವೇರಿ ಭವನ), ನಿಗಮ ಕಚೇರಿಯ ಆಂತರಿಕ ಪರಿಶೊಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದು, 1985ರಿಂದಲೂ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಇವರ ಕವನಗಳು, ಸಣ್ಣ ಕಥೆಗಳು, ರೂಪಕಗಳು, ಕಿರುನಾಟಕಗಳು, ಲೇಖನಗಳು, ಹಾಸ್ಯ ಬರಹಗಳು ಪ್ರಸಾರವಾಗಿವೆ. ಕೃತಿಗಳು: ಚೈತ್ರಪ್ರಿಯಾ(ಕವನ ಸಂಕಲನ-1988), ಅನುರಾಗದ ಆಸರೆ(ಸಾಮಾಜಿಕ ಕಾದಂಬರಿ-1988) ಗಂಗೇ ಗಂಡನ ...
READ MORE