’ಕಥೆಯಂ ಕೇಳೆಲೊ ಕಂದ ’ ಮೈ ಶ್ರೀ ನಟರಾಜ ಈವರೆಗಿನ ಕಥೆಗಳು ಕನ್ನಡ ಸಾಹಿತ್ಯಕ್ತ ಇಂಡಿಯನ್ ಡಯಾಸ್ಕೋಡಾ ನೀಡಿದ ಕೊಡುಗೆ, ಕವಿ, ಅನುವಾದಕ, ಲೇಖಕ, ಕತೆಗಾರ, ಕನ್ನಡ ಸಂಘಟಕರೂ ಆಗಿರುವ ಅವರು ಹಲವು ವರ್ಷಗಳಿಂದ ಅಮೇರಿಕದಲ್ಲಿ ನೆಲಸಿದ್ದರೂ ಕನ್ನಡದ ಬಗ್ಗೆ ಯೋಚಿಸುತ್ತಾರೆ. ಒಟ್ಟು ಏಳು ಕಥೆಗಳಿರುವ ಈ ಸಂಕಲನದಲ್ಲಿ 'ಕಥೆಯ ಕೇಳೆಲೊ ಕಂದ' ಕೂಡ ಒಂದು.
ಪ್ರಬುದ್ಧರ ಕತೆಗಳೇ ಇಡೀ ಮಸ್ತಕಕ್ಕೆ ಹೆಸರು ಕೊಟ್ಟ ಈ ಆಜಧಾನ ಕತೆಯಲ್ಲಿ ನಾವು ಕಾಣುವುದು ಅಮೇರಿಕದಲ್ಲಿರುವ ವ್ಯಕ್ತಿಯೊಬ್ಬ ತನ್ನ ಮಗನಿಂದ 'ಲಪ' ಎಂದು ತಿರಸ್ಕಾರಕ್ಕೆ ಹಿಳಗಾದಾಗ ಮಗನಿಗೆ ಹೇಳುವ, ಹಿಂದೆ ಭಾರತದಲ್ಲಿ ತಾನು ಅನುಭವಿಸಿದ ತನ್ನದೇ ಬಾಲ್ಯದ ಏಚಾರ. ಒಂದೆಡೆ ಅಸ್ತಿತ್ವದ ಹೋರಾಟ, ಇನ್ನೊಂದೆಡೆ ಕೊನೆಗೂ ಈ ಹೋರಾಟದ ಅರ್ಥವೆನೆಂಬ ಪ್ರಶ್ನೆ ಈ ಎಲ್ಲಾ ಕತೆಗಳನ್ನೂ ಆವರಿಸಿವೆ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವ ದ್ವಂದ್ಯ ಮುಖ್ಯ ಪಾತ್ರಗಳನ್ನು ಯಾವತ್ತೂ ಕಾಡುತ್ತ ಇರುತ್ತದೆ, ಇದರಲ್ಲಿ ಪತಿ-ಪತ್ನಿ, ಅಪ್ಪ-ಮಗ, ಗೆಳೆಯ-ಗೆಳತಿಯರು ಬಿಡುಗಡೆಯೇ ಇಲ್ಲದಂತೆ ಸಿಕ್ಕಿಹಾಕಿಕೊಂಡಿರುತ್ತಾರೆ. ಇವೆಲ್ಲದರ ಹಿಂದೆ ನಿರ್ಭಾವುಕವೂ ಆದ ವ್ಯವಸ್ಥೆಯೊಂದು ಎಲ್ಲರ ಮೇಲಾ ಹಿಡಿತ ಸಾಧಿಸುತ್ತ ಇರುತ್ತದೆ.
ನಟರಾದ ಹಿತಮಿತವಾದ ಶೈಲ ಓದಿನ ಆಸ್ವಾದವನ್ನು ಹೆಚ್ಚಿರುತ್ತದೆ. ಸದ್ಯ ಎಲ್ಲ ಕಡೆ ಪ್ರಾದೇಶಿಕ ಭಾಷಾಶೈಲಿಯೇ ನಿರೂಪಣಾ ಶೈಲಿಯ ಈಗಿರುವಾಗ, ನಟರಾಜರು ಸಾರ್ವಜನಿಕ ಮಧ್ಯಮ ಭಾಷೆಯನ್ನು ಬಳಸಿ, ಅದರ ಸಾಧ್ಯತೆಗಳು ಎಂದೂ ಮುಗಿಯುವುದಿಲ್ಲ ಎಂಬ ವಿಶ್ವಾಸವನ್ನು ಮತ್ತೆ ಮಾಡಿಸುತ್ತಾರೆ. ಆಗ ಅಲ್ಲಲ್ಲಿ ಬರುವ ಪ್ರಾದೇಶಿಕ ನುಡಿಗಟ್ಟುಗಳು ಹೆಚ್ಚು ಅರ್ಥಪೂರ್ಣವಾಗಿ ತೋರುತ್ತವೆ. ಇಂಥ ಪ್ರಾಮಾಣಿಕತೆ ಇಂದು ಅಪೂರ್ವ, ನಿರೂಪಣಾತಂತ್ರವನ್ನೂ ಅವರು ಕಣ್ಣಿಗೆ ಹೊಡೆಯದ ಹಾಗೆ ಸೂಕ್ಷ್ಮವಾಗಿ ಉಪಯೋಗಿಸುತ್ತಾರೆ.