ಈ ಸಂಕಲನದ ಕಥೆಗಳೆಲ್ಲವೂ ಮನುಷ್ಯನೊಬ್ಬನ ಸ್ವಗತದಂತೆ ಕಂಡರೂ, ಬಾಳಿನ ವಾಸ್ತವ ಬದುಕನ್ನು ತಾವೇ ತೋಡಿಕೊಂಡಂತಿವೆ. ಹನ್ನೆರಡು ಕತೆಗಳನ್ನು ಎಸ್. ಗಂಗಾಧರಯ್ಯ ನೀಡಿದ್ದಾರೆ. ಅನೇಕ ಅನಿರೀಕ್ಷಿತ ಸಂದಿಗ್ಧತೆಗಳಿಗೆ ಒಳಗಾದ ಹಳ್ಳಿ ಬದುಕಿನ ಚಿತ್ರಣ ಮತ್ತು ಹುಟ್ಟಿದ ನೆಲದಲ್ಲೇ ಅಪರಿಚಿತರಂತೆ ಉಳಿದು ಹೋದ ವ್ಯಕ್ತಿ ಜೀವನಗಾಥೆ ಇಲ್ಲಿನ ಕಥೆಗಳ ಮುಖ್ಯ ವಸ್ತು. ಹಳ್ಳಿ ಸೊಗಡನ್ನು ಪರಿಚಯಿಸುವ ಜೊತೆಯಲ್ಲೇ ಹಳ್ಳಿ ಜೀವನದ ಸಾಂಸ್ಕೃತಿಕ ನಡೆನುಡಿ, ಅಸಹಾಯಕತೆಯ ಅನಿವಾರ್ಯ ಬದಲಾವಣೆಯು ಹಳ್ಳಿಯ ದೇಸೀ ಸೊಗಡಿನ ಭಾಗವನ್ನು ಭಾಗಿಸಿಬಿಟ್ಟ ಭಾವವನ್ನು ಈ ಕತೆಗಳು ಓದುಗರ ಮನಸ್ಸಿನಲ್ಲಿ ತರುತ್ತವೆ.
ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ. ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ...
READ MOREಕತೆಗಾರ ಎಸ್. ಗಂಗಾಧರಯ್ಯ ಅವರಿಂದ ಕತೆ ಕೇಳೋಣ ಬನ್ನಿ ಸರಣಿಯಲ್ಲಿ `ದೇವರ ಕುದುರೆ’ ಕತಾವಾಚನ
ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ-2019
ಶಿವಮೊಗ್ಗದ ಕರ್ನಾಟಕ ಸಂಘದ ’ಅನಂತಮೂರ್ತಿ ಕಥಾ ಪ್ರಶಸ್ತಿ’ 2019