‘ಕರ್ನಾಟಕ ಕೇಸರಿ’ ಕೃತಿಯು ಬಿ.ವಿ. ಶಿವಾನಂದ ರಾವ್ ಅವರ ಸಂಪಾದಿತ ಕಥಾಸಂಕಲನವಾಗಿದೆ. ಬಿ. ಎ. ಸನದಿಯವರ ಆಯ್ದ ಕಥೆಗಳನ್ನು ಇಲ್ಲಿ ಕಾಣಬಹುದಾಗಿದೆ. ಮನುಷ್ಯ ಮನುಷ್ಯನನ್ನು ದ್ವೇಷಿಸುವಂತೆ ಮಾಡುವ ಮೂಲ ಎಲ್ಲಿದೆಯೆಂದು ಅವರು ಹುಡುಕುತ್ತಾರೆ. ಕೋಮು ಗಲಭೆಗಳು – ಬಾಂಬುಸ್ಫೋಟಗಳು – ಜಾಗತಿಕ ರಾಜಕಾರಣದ ವ್ಯವಸ್ಥೆಗಳೆಲ್ಲ ಸನದಿಯವರ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿವೆ. ಅವರ ಲೇಖನಿ ಮಾತನಾಡುತ್ತ ಸ್ನೇಹದ ಸೇತುವನ್ನು ಕಟ್ಟಲಾರೆವೇ ಎಂದು ಮರುಗುತ್ತದೆ. ಆಕಾಶದಲ್ಲಿ ಸಂಚರಿಸುವ ಮೋಡಗಳು, ಹಕ್ಕಿಗಳು ನೆಲಕ್ಕೆ ಇಳಿದು ಬರಬೇಕೆನ್ನುವ ಹಂಬಲ ಅವರದು. ಎಲ್ಲೋ ಇದೆಯೆಂದು ನಂಬುವ ಸ್ವರ್ಗವೂ ಸಹ ನೆಲಕ್ಕಿಳಿದರೆ ಎಷ್ಟು ಚೆನ್ನವೆಂದು ಅವರು ಕಥೆ-ಕಾವ್ಯಗಳ ಮೂಲಕ ಅಶಿಸುತ್ತಾರೆ.
ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು. ಸನದಿಯವರ ತಾಜ್ ಮಹಲ್ ಮತ್ತು ಧೃವ ಬಿಂದು ಕವನ ...
READ MORE(ಪುಸ್ತಕ ಪರಿಚಯ- ಜೂನ್ 2023 ಹೊಸತು)
ಗೌರೀಶ ಕಾಯ್ಕಿಣಿಯವರಿಂದ ಮಾನವ್ಯ ಕವಿಯೆಂದು ಅಭಿಮಾನಪೂರ್ವಕ ಕರೆಸಿಕೊಂಡ ಕವಿ ಬಿ. ಎ. ಸನದಿಯವರು ಸೊಗಸಾದ ಕಥೆಗಳನ್ನು ಬರೆಯುವುದರಲ್ಲೂ ಸಿದ್ಧಹಸ್ತರು. ಇವರ ಕವನ ಸಂಕಲನಗಳು ಹೊರಬಂದಂತೆ ಕಥಾ ಸಂಕಲನಗಳೂ ಪ್ರಕಟಗೊಂಡಿವೆ. ಕಥೆಗಳಾಗಲೀ, ಕವನಗಳಾಗಲೀ ಅವರ ಬರವಣಿಗೆಯಲ್ಲಿ ಎದ್ದು ಕಾಣುವುದು ಸಾಮಾನ್ಯ ಜನತೆಯ ದೈನಂದಿನ ಬದುಕಿನ ನೈಜ ಚಿತ್ರಣ ನೊಂದವರಿಗಾಗಿ ಅಲ್ಲಿರುವುದು ಒಂದೆರಡು ಹನಿ ಕಣ್ಣೀರು ಮತ್ತು ನಿಟ್ಟುಸಿರು. ಶ್ರೀಮಂತರ ಪರವಾಗಿ, ಕನಸಿನ ಸಾಮ್ರಾಜ್ಯದ ಕಲ್ಪನೆಯಲ್ಲಿ ಅವರೆಂದೂ ತೇಲಿದವರಲ್ಲ ಜಾತಿ-ಮತಗಳು ಮಾನವತೆಯ ಮುಂದೆ ಅವರಿಗೆ ತರಗೆಲೆಗಳಂತೆ. ಮನುಷ್ಯ ಮನುಷ್ಯನನ್ನು ದ್ವೇಷಿಸುವಂತೆ ಮಾಡುವ ಮೂಲ ಎಲ್ಲಿದೆಯೆಂದು ಅವರು ಹುಡುಕುತ್ತಾರೆ. ಕೋಮು ಗಲಭೆಗಳು – ಬಾಂಬುಸ್ಫೋಟಗಳು – ಜಾಗತಿಕ ರಾಜಕಾರಣದ ವ್ಯವಸ್ಥೆಗಳೆಲ್ಲ ಸನದಿಯವರ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿವೆ. ಅವರ ಲೇಖನಿ ಮಾತನಾಡುತ್ತ ಸ್ನೇಹದ ಸೇತುವನ್ನು ಕಟ್ಟಲಾರೆವೇ ಎಂದು ಮರುಗುತ್ತದೆ. ಆಕಾಶದಲ್ಲಿ ಸಂಚರಿಸುವ ಮೋಡಗಳು, ಹಕ್ಕಿಗಳು ನೆಲಕ್ಕೆ ಇಳಿದು ಬರಬೇಕೆನ್ನುವ ಹಂಬಲ ಅವರದು. ಎಲ್ಲೋ ಇದೆಯೆಂದು ನಂಬುವ ಸ್ವರ್ಗವೂ ಸಹ ನೆಲಕ್ಕಿಳಿದರೆ ಎಷ್ಟು ಚೆನ್ನವೆಂದು ಅವರು ಕಥೆ-ಕಾವ್ಯಗಳ ಮೂಲಕ ಅಶಿಸುತ್ತಾರೆ. ಅವರ ಆಯ್ದ ಕವನಗಳ ಸಂಗ್ರಹ 'ಶಾಂತಿಗೊಂದು ಸವಾಲು' ಕೂಡ ಕಳೆದ ತಿಂಗಳು ಪ್ರಕಟಗೊಂಡಿದೆ.