ಲೇಖಕ ಬಸವರಾಜ ಕಟ್ಟೀಮನಿ ಅವರು ಹೇಳುವಂತೆ 1938 ರಿಂದ 1942 ರವರೆಗಿನ ಅವಧಿಯಲ್ಲಿ ಬರೆದ ಸಣ್ಣ ಕಥೆಗಳ ಸಂಕಲವಿದು. ಕೆಲವು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಾಶ್ಚಾತ್ಯರ ಸಣ್ಣ ಕಥೆಗಳ ಬರೆಹದಲ್ಲಿ ವಿನೂತನ ತಂತ್ರಗಳು, ನಿರೂಪಣಾ ಶೈಲಿಯು ತೀವ್ರತರವಾಗಿ ಬದಲಾವಣೆಗೊಂಡಿವೆ. ಕನ್ನಡದ ಸಣ್ಣ ಕಥೆಗಳು ಸಹ ಹಿಂದೆ ಉಳಿಯಬಾರದು ಎಂಬ ಕಾರಣಕ್ಕೆ ಈ ಕಥೆಗಳಲ್ಲಿ ವಿನೂತನ ತಂತ್ರ-ನಿರೂಪಣೆ ಶೈಲಿಯನ್ನು ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಮೋಹದ ರಾತ್ರಿ, ಗುಲಾಬಿ ಹೂ, ರೂಪದ್ವೇಷಿ ಸೇರಿದಂತೆ ಏಳು ಕಥೆಗಳಿವೆ.
ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ. ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...
READ MORE