‘ಮಸುಕಿದೀ ಮಬ್ಬಿನಲಿ’ ಹಿರಿಯ ಸಾಹಿತಿ ಹೇಮಾ ಪಟ್ಟಣಶೆಟ್ಟಿ ಅವರ ಕಥಾಸಂಕಲನ. 1978ರಲ್ಲಿ ಪ್ರಥಮ ಮುದ್ರಣ ಕಂಡಿದ್ದ ಈ ಕೃತಿ, 2023ರಲ್ಲಿ ಮೂರನೇ ಮುದ್ರಣ ಕಂಡಿದೆ. ಈಗಲೂ ಈ ಕತೆಗಳು ಹೊಸದಾಗಿ ಬರೆದ ಕತೆಗಳೇ ಅನ್ನಿಸುತ್ತವೆ. ಹಾಗೆ ಅನ್ನಿಸಲು ಕಾರಣ ಕತೆಗಳ ವಸ್ತು ಮತ್ತು ಅಲ್ಲಿ ಬಳಕೆಯಾದ ಭಾಷೆ. ಆಗಲೂ ಇವು ಫ್ರೆಶ್ ಕತೆಗಳು ಎನ್ನಿಸಿದ್ದವು. ಈಗಲೂ ಅನ್ನಿಸುತ್ತವೆ. ಇವು ‘ತಾಜಾ’ ಎನ್ನಿಸುವುದು ಕತೆಗಳಲ್ಲಿರುವ ಸಂವೇದನೆಯ ಕಾರಣಕ್ಕೆ. ಅಲ್ಲದೆ ಅವುಗಳಲ್ಲಿ ದಾಖಲಾಗಿರುವ ಮನೋಲೋಕ. ‘ಭಾವನಾತ್ಮಕ’ ಅಂತ ಅನ್ನಿಸಿದರೂ ಅವು ಕೇವಲ ಅಷ್ಟೇ ಆಗಿಲ್ಲ. ಬದಲಿಗೆ ವ್ಯಕ್ತಿಗಳ ಮನೋವ್ಯಾಪಾರಗಳನ್ನು ಅರಿತೋ ಅರಿಯದೆಯೋ ದಾಖಲಿಸಿದ ಕ್ರಮ ಗಮನ ಸೆಳೆಯುತ್ತದೆ ಹಾಗೂ ಓದಿನ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.
ಈ ಸಂಕಲನದ ಕತೆಗಳು ತನ್ನ ವಸ್ತು ವೈವಿಧ್ಯ ಹಾಗೂ ಕಟ್ಟು ಕ್ರಮದಲ್ಲಿನ ಭಿನ್ನತೆಯ ಕಾರಣದಿಂದ ಕೂಡ ಗಮನ ಸೆಳೆಯುತ್ತವೆ. ಮೊದಲನೆಯ ಕತೆಯಾಗಿ ಪ್ರಕಟಗೊಂಡಿರುವ ‘ಮುಸುಕಿದೀ ಮಬ್ಬಿನಲಿ’ಯು ಇಡೀ ಸಂಕಲನದ ಬೆಸ್ಟ್ ಕತೆ ಅನ್ನುವುದರಲ್ಲಿ ಅನುಮಾನಗಳಿಲ್ಲ. ಈ ಸಂಕಲನದ ಕತೆಗಳು ತನ್ನ ವಸ್ತು ವೈವಿಧ್ಯ ಹಾಗೂ ಕಟ್ಟು ಕ್ರಮದಲ್ಲಿನ ಭಿನ್ನತೆಯ ಕಾರಣದಿಂದ ಕೂಡ ಗಮನ ಸೆಳೆಯುತ್ತವೆ. ಮೊದಲನೆಯ ಕತೆಯಾಗಿ ಪ್ರಕಟಗೊಂಡಿರುವ ‘ಮುಸುಕಿದೀ ಮಬ್ಬಿನಲಿ’ಯು ಇಡೀ ಸಂಕಲನದ ಬೆಸ್ಟ್ ಕತೆ ಅನ್ನುವುದರಲ್ಲಿ ಅನುಮಾನಗಳಿಲ್ಲ. ‘ಬಾವಿ’ ಕತೆಯ ಸಂಕೀರ್ಣತೆ ಕೂಡ ವಿಶೇಷ. ಒಂದಕ್ಕಿಂತ ಮತ್ತೊಂದು ಭಿನ್ನ ವಸ್ತುವನ್ನು ಹೊಂದಿರುವ ಕತೆಗಳಿವು. ಒಂದು ಕತೆಯು ಲೇಡಿಸ್ ಹಾಸ್ಟೆಲ್‌ನ ಲೋಕವನ್ನು ಅನಾವರಣ ಮಾಡಿದರೆ ಮತ್ತೊಂದು ಕತೆಯು ಕಾಲೇಜಿನ ಆವರಣವನ್ನು ಸೃಷ್ಟಿಸುತ್ತದೆ.
ಕುಟುಂಬದೊಳಗಣ ಹೂರಣ ಇನ್ನೊಂದು ಕತೆಯದಾಗಿದೆ. ಈ ಕತೆಗಳಲ್ಲಿನ ನಾಟಕೀಯ ಗುಣ ಗಮನಾರ್ಹ. ಈ ನಾಟಕೀಯತೆಯು ಕೃತಕವಾಗದಂತೆ ನೋಡಿಕೊಂಡಿರುವುದು ಕೂಡ ಕತೆಗಳ ಯಶಸ್ಸಿಗೆ ಕಾರಣ. ಈ ಕತೆಗಳನ್ನು ಓದಿದ ಮೇಲೆ ಬಳಕೆಯಾದ ಭಾಷೆಯ ಕಾರಣಕ್ಕೆ ‘ಕವಿ ಬರೆದ ಕತೆಗಳು’ ಎನ್ನಿಸುತ್ತವೆ. ಕತೆಗಳಲ್ಲಿ ಇರುವ ಕಾವ್ಯಾತ್ಮಕ ಭಾಷೆಯು ಕತೆಗಳನ್ನು ಭಾವಗೀತಾತ್ಮಕಗೊಳಿಸಿದೆ. ಇದು ಪ್ರಜ್ಞಾಪೂರ್ವಕವಾಗಿ ಮಾಡಿಲ್ಲವಾದರೂ ಕತೆಗಾರರಲ್ಲಿನ ಕವಿಗುಣವು ಭಾಷೆ ಹಾಗೂ ಸಂವೇದನೆಯನ್ನು ಮಾನವೀಯ ಹಾಗೂ ಹೃದಯಂಗಮಗೊಳಿಸಿದೆ. ಲೇಖಕರಿಗೆ ಭಾಷೆಯ ಮೇಲಿನ ಪ್ರೀತಿ ಹಾಗೂ ಅದನ್ನು ಅಷ್ಟೇ ಸಸ್ನೇಹವಾಗಿ ಪ್ರಕಟಿಸಿರುವ ಕ್ರಮದಿಂದಾಗಿ ಕವಿತೆ ಕೇಳಿದ ಅನುಭವ ಹಾಗೂ ಕತೆ ಓದಿದ ಅನುಭವಗಳೆರಡೂ ದೊರೆಯುವಂತೆ ಮಾಡಿರುವುದು ವಿಶೇಷ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MORE